ಒಳಗೆ ಸೇರಿದರೆ ಗುಂಡೂ ತ್ರಿಶ ಆದಳು ಫೇಮಸ್ ...ಮಿತಿಮೀರಿದೆ ಜೋಪಾನಾ !!

ಮಂಗಳವಾರ, 16 ಸೆಪ್ಟಂಬರ್ 2014 (11:42 IST)
ಕಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ  ಪಾರ್ಟಿ ಒಂದರಲ್ಲಿ ಹೀರೋಯಿನ್ ಹೀರೋಗೆ ಲಿಕ್ಕರ್ ಕುಡಿಸಿರುವ ಸಂಗತಿ ಈಗ ಅಲ್ಲಿನವರ ಮಾತುಕತೆಗೆ ಗ್ರಾಸ ಸಿಕ್ಕಂತೆ ಆಗಿದೆ. ದಕ್ಷಿಣ ಭಾರತ ಹೀರೋಯಿನ್ ಗಳಲ್ಲಿ ತ್ರಿಶ ಸಹ ಸ್ವಲ್ಪ ಜಾಸ್ತಿನೇ ಫೇಮಸ್. ಆಕೆಯು ತನ್ನ ನಟನೆ, ರೂಪ ಹಾಗೂ ಇನ್ನು ಹಲವಾರು ರೀತಿಯಿಂದ ಜನರ ಗಮನಕ್ಕೆ ಬಂದಿದ್ದಳು. ಇತ್ತೀಚಿನ ದಿನಗಳಲ್ಲಿ   ಆಕೆಗೆ ಅಷ್ಟೇನೂ ಅವಕಾಶಗಳು ಇಲ್ಲದೆ ಹಾಗೆ ಸುಮ್ಮನೆ ಸಿಕ್ಕ ಅವಕಾಶಗಳ ಹಿಂದೆ ಹೋಗುವ  ಪರಿಸ್ಥಿತಿ  ಉಂಟಾಗಿದೆ.   
 
ಕೆಲವು ದಿನಗಳ ಹಿಂದೆ ತ್ರಿಶ ಪಾರ್ಟಿ ಒಂದಕ್ಕೆ ಅಟೆಂಡ್ ಆದಳು. ಅಲ್ಲಿ ಆಕೆ ಲಿಕ್ಕರ್ ಸೇವಿಸಿದ ಫೋಟೋಗಳು ಈಗ ಟಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿದೆ. ಅಲ್ಲದೆ ಈ ಮೊದಲು   ಚೆನ್ನೈ ರಸ್ತೆಯಲ್ಲೇ ಈ ಬಾಲಕಿ ಕುಡಿಯುತ್ತ ಇದ್ದುದು ಪೊಲೀಸರ ಕಣ್ಣಿಗೂ ಸಹಿತ ಬಿದ್ದಿತ್ತು . ಆ ಮೂಲಕ ತಾನು ಸಹ ಭಾಗಶಃ ಬೀದಿ ಕುಡುಕಿ ಎನ್ನುವುದನ್ನು ಸಾಬೀತು ಮಾಡಿದ್ದಾಳೆ ಈ ಚೆಲುವೆ. ಆದರೆ ಈಗ ಬಂದಿರುವ ಸುದ್ದಿಯ ಎಳೆಯನ್ನು ಹುಡುಕುತ್ತ  ಹೋದರೆ ಸಿಕ್ಕ ಸಂಗತಿ ಏನೆಂದರೆ, ಒಂದು ಮರ್ಯಾದಸ್ತರ ಪಾರ್ಟಿಗೆ ಹೋಗಿದ್ದಾಳೆ. ಅಲ್ಲಿ ಆಕೆಯ ಜೊತೆ ಇದ್ದ ಯಂಗ್ ಹೀರೋ ರೇಗಿಸೋಕೆ ನಿನಗೆ  ಕುಡಿಯೋಕೆ ಸಾಧ್ಯಾನ ಎಂದು ಲಿಕ್ಕರ್ ಮುಂದೆ ಇಟ್ಟಿದ್ದಾನೆ. ಈಕೆಗೂ ಜೋಶ್ ಬಂದು ಚೂರು ಸೇವನೆ ಮಾಡಿದ್ದಾಳೆ. ಅದರ ಫೋಟೋಗಳು ಈಗ ನೆಟ್ ನಲ್ಲಿ ಓಡಾಡುತ್ತಿದೆ. ಸೊ ಈ ಮುಖಾಂತರ ಅವಕಾಶಗಳು ಇಲ್ಲದೆ ಇದ್ದರು ಸಹಿತ ಸುದ್ದಿಯಲ್ಲಿ ಇದ್ದಾಳೆ ಈ ಚೆಲುವೆ. ಆಕೆ ಕುಡಿದ್ಲೋ ಬಿಟ್ಟಳೋ ಗೊತ್ತಿಲ್ಲ ,ಆದರೆ  ಕುಡಿದಳು ಎನ್ನುವ ಸುದ್ದಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಈ ಮುಖಾಂತರ ಮಾಧ್ಯಮಗಳಲ್ಲಿ ಹೆಚ್ಚು  ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾಳೆ ಈ ಚೆಲುವೆ.. ಒಳಗೆ ಸೇರಿದರೆ ಗುಂಡೂ ಹುಡುಗಿ ಆಗುವಳು ಪಾಪ್ಯುಲರ್ ಅಂತ ಈಗ ಮಾಧ್ಯಮಗಳು ಹಾಡ್ತಾ ಇವೆ!

ವೆಬ್ದುನಿಯಾವನ್ನು ಓದಿ