ಈ ಪರಪಂಚದಲ್ಲಿ ಶಾಯರಿ ಗುಣಗುಣಿಸಿದರು ಅನಂತ್ ನಾಗ್

ಬುಧವಾರ, 17 ಸೆಪ್ಟಂಬರ್ 2014 (10:09 IST)
ಅನೇಕ  ರೀತಿಯ ಭಿನ್ನತೆಗಳನ್ನು ತಮ್ಮ ಪಾತ್ರದ ಮೂಲಕ ಪ್ರೇಕ್ಷಕರಿಗೆ ನೀಡಿರುವ ಅಂದ ಕಾಲತ್ತಿನ ಮೋಸ್ಟ್ ಚಾರ್ಮಿಂಗ್ ನಟ ಅನಂತ್ ನಾಗ್ ಈಗ ಹಾಡುಗಾರರಾಗಿ ಜನರ ಮುಂದೆ ಬರುತ್ತಿದ್ದಾರೆ, ಅವರು ಪರಪಂಚ ಚಿತ್ರಕ್ಕೆಂದು ಕಳೆದ ವಾರ ಶಾಯರಿಗಳನ್ನು ಹಾಡಿದ್ದಾರೆ. ಅದು ಒಂದು ಎರಡಲ್ಲ ಹನ್ನೊಂದು ಶಾಯರಿಗಳು.  ಈ ಎಲ್ಲ ಶಾಯರಿಗಳನ್ನು ಚಿತ್ರದ ನಿರ್ದೇಶಕ ಕ್ರಿಶ್ ಜೋಶಿ ರಚಿಸಿದ್ದಾರೆ. ಈ ಚಿತ್ರದಲ್ಲಿ ಬರುವ ಅನಂತ್ ಪಾತ್ರವು ಸಂಪೂರ್ಣವಾಗಿ ಶಾಯರಿಗಳ ಮೂಲಕ ಪ್ರಕಟವಾಗುತ್ತದೆಯಂತೆ.
 
ವೈಯಕ್ತಿಕವಾಗಿ ಅತ್ಯುತ್ತಮ ವಾದ್ಯ ಸಂಗೀತಗಾರ ಆಗಿರುವ ಅನಂತ್ ಮೊಟ್ಟ ಮೊದಲ ಬಾರಿ ಹಾಡಿದ್ದಾರೆ. ಈ ಚಿತ್ರ ಸಂಪೂರ್ಣವಾಗಿ ಬಾರ್ ಮತ್ತು ರೆಸ್ಟೋರೆಂಟ್ ಚಿತ್ರಿತವಾಗಿದೆ. ಇದರಲ್ಲಿ ದಿಗಂತ್, ಅಶೋಕ್, ರಾಗಿಣಿ , ವಿ ಮನೋಹರ್ ಮುಂತಾದವರು ನಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ