ಹೆಚ್‌ಐವಿ ಮಗುವನ್ನು ದತ್ತು ಪಡೆದು ರೀಲ್ ಸ್ಟಾರ್ ಉಪ್ಪಿ ಆದ್ರು ರಿಯಲ್ ಸ್ಟಾರ್

ಬುಧವಾರ, 17 ಸೆಪ್ಟಂಬರ್ 2014 (10:12 IST)
ರಿಯಲ್ ಸ್ಟಾರ್ ಉಪೇಂದ್ರ ತಾವು ನಿಜವಾಗಿ ರಿಯಲ್ ಸ್ಟಾರ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ ಇತ್ತೀಚಿಗೆ ನಡೆದ ಪ್ರಸಂಗ ಒಂದರ ಮೂಲಕ. ಉಪೇಂದ್ರ ಮೈಸೂರಿನಲ್ಲಿ 9  ವರ್ಷದ  ಸೋನಾಲಿಯನ್ನು ದತ್ತು ತೆಗೆದುಕೊಂಡಿದ್ದಾರೆ. ಹೆಚ್ಐವಿ ಕಾಯಿಲೆಗೆ ತುತ್ತಾಗಿರುವ ಈ ಮಗುವನ್ನು ಅಡಾಪ್ಟ್ ಮಾಡಿಕೊಳ್ಳುವುದರ ಮೂಲಕ ತಮ್ಮ ಬದುಕಿನ ಸಾರ್ಥಕತೆ ಹೆಚ್ಚಿಸಿಕೊಂಡಿದ್ದಾರೆ ಉಪೇಂದ್ರ. ಮೈಸೂರಿನಲ್ಲಿ ವೈರಸ್ ಫ್ರೀ ಇಂಡಿಯಾ-2015 ಕಾರ್ಯಕ್ರಮವನ್ನು ಬಿಡುಗಡೆ ಮಾಡಿದ ನಂತರ ಈ ಒಳ್ಳೆಯ ಕೆಲ್ಸಕ್ಕೆ ಮುಂದಾಗಿದ್ದಾರೆ.
  
ಹಣ ಬದುಕಲ್ಲಿ ಮುಖ್ಯವಲ್ಲ. ನಾವು ಗಳಿಸಿದ ಒಂದಷ್ಟು ಹಣವನ್ನು ದಾನಧರ್ಮ ಮಾಡ ಬೇಕು. ಹೆಚ್‌ಐವಿಯಿಂದ ಬಳಲುತ್ತಿರುವ ಮಕ್ಕಳು ದೇವರ ಮಕ್ಕಳು ಎಂದು ಈ ಸಮಯದಲ್ಲಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕ ಉಪೇಂದ್ರ ಹಾಗೂ ಬಹಳಷ್ಟು ಗಣ್ಯರು ಭಾಗವಹಿಸಿದ್ದರು. ಅನೇಕ ಗಣ್ಯರು ಸಹ ಇಂತಹ ಮಕ್ಕಳನ್ನು ದತ್ತು ತೆಗೆದುಕೊಂಡರು. ಸಧ್ಯದಲ್ಲೇ ಉಪೇಂದ್ರ ನಟನೆಯ ಸೂಪರ್ ರಂಗ ಚಿತ್ರ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಕೃತಿ ಕರಬಂಧ ಮತ್ತು ಪ್ರಿಯಾಂಕ ರಾವ್ ನಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ