ಶಂಕರ್ ಐ ಟ್ರೇಲರ್ ಮಾಡಿದ ಸದ್ದಿಗೆ ಭಾರತೀಯ ಚಿತ್ರರಂಗವೇ ಬೆರಗಾಯ್ತು !

ಬುಧವಾರ, 17 ಸೆಪ್ಟಂಬರ್ 2014 (10:20 IST)
ಶಂಕರ್ ಅವರ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಐ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಅದಕ್ಕೆ ಕಾರಣ ಇದಕ್ಕೆ ಹೂಡಿರುವ ಹಣ ಮತ್ತು ದಿನೇದಿನೇ ತನ್ನ ಕುತೂಹಲವನ್ನು ಬೆಳೆಸಿಕೊಂಡ ಪರಿ. ಈ ಸಿನಿಮಾದ ಆಡಿಯೋ ಸೋಮವಾರ ಅಂದರೆ   ಸೆಪ್ಟೆಂಬರ್ 15ರಂದು ಚೆನ್ನೈ ನಗರದಲ್ಲಿ ನಡೆಯಿತು. ಅದರ ಟ್ರೇಲರ್ ಎಲ್ಲರ ಗಮನ ತನ್ನೆಡೆ ಸೆಳೆದಿದೆ.  ಅದು ಬಿಡುಗಡೆಯಾದ ಸ್ವಲ್ಪ ಹೊತ್ತಿನಲ್ಲೇ ಸಾಕಷ್ಟು ಸಂಚಲನ ಉಂಟು ಮಾಡಿದೆ.
 
ಕೇವಲ ಹನ್ನೆರಡು ಗಂಟೆಗಳಲ್ಲಿ ಆ ಸಿನಿಮಾದ ಟ್ರೇಲರ್ 9 ಲಕ್ಷ ಹಿಟ್ಸ್ ಪಡೆದಿವೆ. ಮುಖ್ಯವಾಗಿ ಆ ಚಿತ್ರದ ಟ್ರೇಲರ್ ಎಲ್ಲರ ಗಮನ ತನ್ನೆಡೆ ಸೆಳೆಯುವಂತೆ ಮಾಡಿದೆ. ಅದರಲ್ಲಿ ನೀಡಿರುವ ಗ್ರಾಫಿಕ್ಸ್ ಪ್ರತಿಯೊಬ್ಬರನ್ನು ತನ್ನತ್ತ ಸೆಳೆಯುತ್ತಿದೆ. ಬಹು ನಿರೀಕ್ಷೆಯ ಈ ಚಿತ್ರವೂ ದೇಶವಿದೇಶಗಳಲ್ಲಿ ಸಾಕಷ್ಟು ಥಿಯೇಟರ್‌ಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದ್ದು ಆ ಮೂಲಕವೂ ರೆಕಾರ್ಡ್ ಮಾಡುವತ್ತ ಚಿತ್ತ ನೆಟ್ಟಿದೆ. 180  ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾಗಿದೆ ಐ ಚಿತ್ರ.
 
ವಿಕ್ರಮ್ ಭಿನ್ನ ಗೆಟಪ್ಸ್ , ಲೋಕೇಶನ್ ಪ್ರತಿಯೊಂದು ಗಮನ ಸೆಳೆಯುವಂತಿದೆ. ಹಾಲಿವುಡ್ ಚಿತ್ರವನ್ನು ನೋಡಿದಂತಹ ಭಾವನೆ ಉಂಟಾಗುತ್ತಿದೆ ಎಂದು ಖುಷಿಯಿಂದ ಹೇಳಿದ್ದಾರೆ ವೀಕ್ಷಕರು. ಈ ಚಿತ್ರವು ದೀಪಾವಳಿಯ  ಸಂದರ್ಭದಲ್ಲಿ ಬಿಡುಗಡೆ ಆಗಲಿದೆ. 

ವೆಬ್ದುನಿಯಾವನ್ನು ಓದಿ