ಹುಟ್ಟು ಹಬ್ಬದ ಶುಭಾಶಯಗಳು ಡಾ. ವಿಷ್ಣುವರ್ಧನ್-ಉಪೇಂದ್ರ

ಗುರುವಾರ, 18 ಸೆಪ್ಟಂಬರ್ 2014 (10:21 IST)
ಇಂದು ಗುರುವಾರ ಅದಕ್ಕಿಂತ ಹೆಚ್ಚಾಗಿ ಹೇಳ ಬೇಕಾದ ಸಂಗತಿ ಎಂದರೆ...  ದಿವಂಗತ  ಡಾ. ವಿಷ್ಣುವರ್ಧನ್  ಮತ್ತು   ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬ. ಕನ್ನಡ ಚಿತ್ರರಂಗ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲೂ ಸಹಿತ ಹೆಚ್ಚಿನ ಸಾಧನೆ ತೋರಿರುವ ಈ ಕಲಾವಿದರು ಕನ್ನಡ ಚಿತ್ರರಂಗದ ಹೆಮ್ಮೆಯ ಆಸ್ತಿ.  ವಿಷ್ಣುವರ್ಧನ್  ಮರೆಯಾದರು ಸಹಿತ ತಮ್ಮ ಚಿತ್ರಗಳ ಮೂಲಕ ಸದಾ ಜನಮಾನಸದಲ್ಲಿ  ಇದ್ದಾರೆ. ಅದೇರೀತಿ ತಮ್ಮ ಅಭಿನಯ, ನಿರ್ದೇಶನದ ಮೂಲಕ ಜನರನ್ನು ಗೆದ್ದು ಹೊಸತನಗಳಿಗೆ ಹರಿಕಾರ ಆಗಿದ್ದಾರೆ ಉಪೇಂದ್ರ.. ಈ ಮಹಾನ್ ಕಲಾವಿದರಿಗೆ ವೆಬ್ ದುನಿಯಾ ಪತ್ರಿಕೆಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. 
 
ಇಂದು ಅಂದರೆ ಸೆಪ್ಟೆಂಬರ್ 18 .. ಸಿನಿ ಪ್ರೇಮಿಗಳಿಗೆ ರಸದೌತಣ ನೀಡಲು ಸಹೋದರರ ಸವಾಲ್ ಮೂಲಕ ವಿಷ್ಣುವರ್ಧನ್ ಮತ್ತು ಸೂಪರ್ ರಂಗ ಚಿತ್ರದ ಮುಖಾಂತರ  ಉಪೇಂದ್ರ ತೆರೆ ಏರುತ್ತಿದ್ದಾರೆ. ಉಪೇಂದ್ರ ಅವರ ಸೂಪರ್ ರಂಗ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದು, ಈ ಚಿತ್ರದ ಹಾಡುಗಳು ಅತ್ಯಂತ ಆಸಕ್ತಿ ಮೂಡಿಸಿದೆ. ಅದರಲ್ಲೂ ಕೃತಿ ಕರಬಂಧ ಜೊತೆ ನಟಿಸಿರುವ ಹಾಡಿನ ಬಗ್ಗೆ  ಹೆಚ್ಚು ಕುತೂಹಲ ಪ್ರೇಕ್ಷಕರಲ್ಲಿ ಇದೆ..ಈ ಚಿತ್ರದಲ್ಲಿ ಉಪ್ಪಿ ಜೊತೆಗೆ ಪ್ರಿಯಾಂಕ ರಾವ್ ಸಹ ಲೀಡ್ ರೋಲ್ ನಲ್ಲಿ ಇದ್ದಾರೆ

ವೆಬ್ದುನಿಯಾವನ್ನು ಓದಿ