ನನಗೆ ನನ್ನ ಹೆಂಡ್ತಿ ವಾಪಸ್ ಕೊಡ್ಸಿ ಪ್ಲೀಸ್ ಪ್ಲೀಸ್

ಶುಕ್ರವಾರ, 19 ಸೆಪ್ಟಂಬರ್ 2014 (10:37 IST)
2004ರಲ್ಲಿ ನಾನು ಮದುವೆಯಾಗಿದ್ದೆ. ಅಲ್ಲದೆ ನಾಲ್ಕು ತಿಂಗಳ ಕಾಲ ಸಂಸಾರ ಕೂಡ ಮಾಡಿದ್ದೆ. ಬಳಿಕ ಆಕೆ ನನ್ನ ಬಳಿ ಇದ್ದ 2 ಲಕ್ಷ ರೂ.ಗಳನ್ನು ಅಪಹರಿಸಿ ನಾಪತ್ತೆಯಾಗಿದ್ದಳು. ನನ್ನ ಹೆಂಡತಿಯು ಮತ್ತೆ ಬಂದು ನನ್ನ ಜೊತೆ ಸಂಸಾರ ಮಾಡುವುದಕ್ಕೆ ಅವಕಾಶ ಮಾಡಿಕೊಡಿ  ಎಂದು ನಿರ್ದೇಶಕ ರಿಷಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನಟಿ ಮೈತ್ರಿಯಾಗೌಡ ಜೊತೆ ನನ್ನ ಮದುವೆಯಾಗಿದೆ. ಆಕೆ ನನ್ನೊಂದಿಗೆ ಬಾಳುವಂತೆ ಸೂಚಿಸಿ ಎಂದು ನಿರ್ದೇಶಕ ರಿಷಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮೈತ್ರಿಯಾಳ ನಿಜವಾದ ಹೆಸರು ಶೃತಿಗೌಡ ಸೂರ್ಯ ದಿ ಗ್ರೇಟ್ ಎಂಬ ಚಿತ್ರದ ಮೂಲಕ ಮೈತ್ರಿಯಾಳನ್ನು  ಚಿತ್ರರಂಗಕ್ಕೆ ಪರಿಚಯ ಮಾಡಿದೆ.  
 
ಚಿತ್ರೀಕರಣ ನಡೆಯುವ ಸಮಯದಲ್ಲಿ ನನಗೆ ಆಕೆ ಮೇಲೆ ಪ್ರೀತಿ ಆಗಿತ್ತು.  2004ರ ಜುಲೈ 17ರಂದು ಮೈತ್ರಿಯಾ ಮತ್ತು ನಾನು  ಶೇಷಾದ್ರಿಪುರಂನ ಸನ್ಮಾನ್ ಲಾಡ್ಜ್ ನಲ್ಲಿ ಮದುವೆಯಾದೆವು. ಅಲ್ಲಿ ನಮ್ಮ ಸಂಸಾರ  ನಾಲ್ಕು ತಿಂಗಳು ಕಾಲವಿತ್ತು ಎಂದು ನಿರ್ದೇಶಕ ರಿಷಿ, ನಟಿ ಮೈತ್ರಿಯಾ ಗೌಡ ವಿವಾಹ ವಿವಾದಕ್ಕೆ ಸಂಬಂಧಿಸಿದಂತೆ ರಿಷಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನನ್ನೊಂದಿಗೆ ಮೈತ್ರಿಯಾ ಜೀವನ ನಡೆಸಲು ಅವಕಾಶ ಮಾಡಿಕೊಡಿ ಎಂದು ನ್ಯಾಯಾಲಯದ ಬಳಿ ಅಲವತ್ತುಕೊಂಡಿದ್ದಾರೆ ರಿಷಿ. 8ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಟಿ ಮೈತ್ರಿಯಾ ವಿರುದ್ಧ ವಂಚನೆ, ಕೊಲೆ ಬೆದರಿಕೆ ಮತ್ತು ಕಳ್ಳತನ ಆರೋಪದಡಿ ದೂರು ದಾಖಲು ಮಾಡಿದ್ದಾರೆ ರಿಷಿ.

ವೆಬ್ದುನಿಯಾವನ್ನು ಓದಿ