ಎಂದಿರನ್-2 (ರೋಬೋ-2 ) ಚಿತ್ರದ ಸಿದ್ಧತೆಯಲ್ಲಿ ಶಂಕರ್.. ಹೊಸ ದಾಖಲೆ ನಿರ್ಮಾಣಕ್ಕೆ ಸಿದ್ಧರಾದ ರಜನಿಕಾಂತ್..

ಸೋಮವಾರ, 22 ಸೆಪ್ಟಂಬರ್ 2014 (11:33 IST)
ಕಾಲಿವುಡ್ ನ ಸ್ಟಾರ್ ನಿರ್ದೇಶಕ ಶಂಕರ್. ಕಳೆದವಾರ ಅವರು ತಮ್ಮ ಐ ಚಿತ್ರದ ಮೂಲಕ ಹೆಚ್ಚು ಸುದ್ದಿಯಾದರು. ವಿಕ್ರಮ್ ನಟನೆಯ ಐ ಚಿತ್ರದ ನಂತರ ಅವರು ಮತ್ತೊಮ್ಮೆ ಎಂದಿರನ್-2  (ರೋಬೋ )  ತಯಾರಿಸಲು ಸಿದ್ಧತೆ ನಡೆಸಿದ್ದಾರೆ. ರೋಬೋ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್  ನಾಯಕ ಮತ್ತು ಖಳನಟ -ರೋಬೋ ಎರಡು ಪಾತ್ರಗಳಲ್ಲಿ ನಟಿಸಿದ್ದರು. ಇದರ ಅನ್ವಯ  ಹಾಲಿವುಡ್ ಚಿತ್ರಗಳಿಗಿಂತ ನಮ್ಮ ಚಿತ್ರಗಳೇನು ಕಡಿಮೆ ಇಲ್ಲ ಎಂದು ಸಾಬೀತು ಮಾಡಿದ್ದರು ಶಂಕರ್ .ತಂತ್ರಜ್ಞಾನದ ವಿಷಯದಲ್ಲಿ ತಾವೇನು ಹಿಂದೆ ಉಳಿದಿಲ್ಲ ಎನ್ನುವುದನ್ನು ಸಾಬೀತು ಮಾಡಿದ್ದರು ಎಂದಿರನ್ ಮೂಲಕ. ಈಗ ಶಂಕರ್ ಎಂದಿರನ್  ಚಿತ್ರದ ಎರಡನೇ   ಭಾಗಕ್ಕೆ ಸಿದ್ಧತೆ ನಡೆಸಿದ್ದಾರೆ.
 
ಅದಕ್ಕೆಂದು ಶಂಕರ್ ಈಗ ಕಥೆಯನ್ನು ಸಿದ್ಧ ಮಾಡಿದ್ದು, ಈ ಚಿತ್ರದಲ್ಲಿ ನಟಿಸಲು ರಜನಿಕಾಂತ್ ಅವರ ಕಡೆಯಿಂದ ಸಮ್ಮತಿ ದೊರಕಿದೆಯಂತೆ. ಈಗ ಚಿತ್ರದ ಹೀರೋಯಿನ್ ಸೇರಿದಂತೆ ತಾಂತ್ರಿಕ ವರ್ಗದತ್ತ ತಮ್ಮ ಗಮನ ನೆಟ್ಟಿದ್ದಾರೆ ಶಂಕರ್. ಮತ್ತೊಮ್ಮೆ ಭಿನ್ನ ರೀತಿಯಲ್ಲಿ ರಜನಿಯನ್ನು ನೋಡುವ ಅವಕಾಶ ಅವರ ಅಭಿಮಾನಿಗಳಿಗೆ. 

ವೆಬ್ದುನಿಯಾವನ್ನು ಓದಿ