ಪ್ರಭುದೇವ ಹಸೆಮಣೆ ಏರಲು ಮತ್ತೆ ಸಿದ್ಧತೆ ??

ಸೋಮವಾರ, 22 ಸೆಪ್ಟಂಬರ್ 2014 (11:37 IST)
ಸೂಪರ್ ಡ್ಯಾನ್ಸರ್, ಆಕ್ಟರ್, ಕೊರಿಯಾಗ್ರಾಫರ್, ಈಗ ಡೈರೆಕ್ಟರ್ ಇಂತಹ ಎಲ್ಲ ಸಂಗತಿಗಳನ್ನು ಏಕಕಾಲದಲ್ಲಿ ಹೊಂದಿರುವ ಪ್ರತಿಭಾವಂತ ಪ್ರಭುದೇವ. ತನ್ನ ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆದ ಈ ನಟ ಆ ಬಳಿಕ ಹೀರೋ ಜೊತೆಗೆ, ಕೊರಿಯಾಗ್ರಫಿಯನ್ನು ಮಾಡಿ ತಾನು ಭಿನ್ನ ಎಂದು ತೋರಿಸಿದರು. ಇದರ ನಡುವೆ ಮದುವೆ, ಮಕ್ಕಳು, ವಿಚ್ಛೇದನ ಹೀಗೆ ಹಲವಾರು ರೀತಿಯಲ್ಲಿ ಮಾಧ್ಯಮಗಳ ಗಮನ ಸೆಳೆದ ಪ್ರಭುದೇವ ಮನ ಗೆದ್ದಿದ್ದ ನಯತಾರಳನ್ನು ಪಡೆಯಲು ಸ್ವಲ್ಪ ಜಾಸ್ತಿ ಕಷ್ಟ ಪಟ್ಟಿದ್ದರು. ಆ ಕಷ್ಟಕ್ಕೆ ಫಲ ಸಿಕ್ಕಲೇ ಇಲ್ಲ, ಅದ್ರ ಪರಿಣಾಮವಾಗಿ ಆತ ತನ್ನ ಸಮಸ್ಯೆಯನ್ನು ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಳಿ ಕೊಂಡೊಯ್ದಿದ್ದ. ಅದಾದ ಬಳಿಕ ಇವ್ಯಾವುದು ಬೇಡ ಎಂದು ಸುಮ್ಮನಾಗಿದ್ದರು. ತಮ್ಮ ಗಮನವನ್ನು ಚಲಚಿತ್ರಗಳ ನಿರ್ದೇಶನದತ್ತ ನೀಡಿದರು. 
 
ಪರಿಣಾಮ ಬಾಲಿವುಡ್ ನಂತಹ ಮಹಾ ಚಿತ್ರನಗರಿಯಲ್ಲಿ ಬಾಕ್ಸಾಫೀಸ್ ನಲ್ಲಿ ಕೊಳ್ಳೆ ಹೊಡೆಯುವ ಚಿತ್ರಗಳನ್ನು ನಿರ್ದೇಶಿಸಲು ಸಾಧ್ಯವಾಯ್ತು. ಅವರು ಈಗ ಬಾಲಿವುಡ್ ಸ್ಟಾರ್ ಡೈರೆಕ್ಟರ್. ಈಗ ಬಂದಿರುವ ಹಾಗೂ ಹರಡಿರುವ ಸುದ್ದಿ ಏನೆಂದರೆ  ಪ್ರಭುದೇವ ಗಮನ ಮತ್ತೊಮ್ಮೆ ಮದುವೆ ಕಡೆಗೆ ಹೋಗಿದೆಯಂತೆ. ಅವರ  ನಿರ್ದೇಶನದ ಮತ್ತು  ಅಜಯ್ ದೇವಗನ್ ನಟನೆಯ ಸಿನಿಮಾ ಆಕ್ಷನ್ ಜಾಕ್ಸನ್ ನಲ್ಲಿ ಫೇಮ‍್ ಆಗಿರುವ ಬಾಲಿವುಡ್ ಕೊರಿಯಾಗ್ರಾಫರ್ ಕೆಲಸ ನಿರ್ವಹಿಸುತ್ತಿದ್ದು, ಆಕೆಯ ಮೇಲೆ ಈತನಿಗೂ ಈಕೆ ಮೇಲೆ ಆಕೆಗೂ ಲವ್ವಾಗಿದೆಯಂತೆ.. ಹಾಗಂತ ಸುದ್ದಿ ಬಿ ಟೌನ್ ಪೀಪಲ್ ಕಿವಿಯಿಂದ ಕಿವಿಗೆ ಹರಡಿದೆ.. ಅದು ಸತ್ಯವೆ ಇಲ್ಲವೇ ಎನ್ನುವುದು ಸಧ್ಯದಲ್ಲೇ ತಿಳಿಯುತ್ತದೆ.. !  

ವೆಬ್ದುನಿಯಾವನ್ನು ಓದಿ