ಲಿಂಗಾ ಚಿತ್ರದಲ್ಲಿ ರಜನಿ ಸಾಹಸ ದೃಶ್ಯಕ್ಕೆ ಬೆರಗಾದ ಹಾಲಿವುಡ್ ಅಕ್ಷನ್ ಮಾಸ್ಟರ್...ಆ ... ಎಪ್ಪಡಿ !!

ಮಂಗಳವಾರ, 23 ಸೆಪ್ಟಂಬರ್ 2014 (10:23 IST)
ಸೂಪರ್ ಸ್ಟಾರ್ ಯಾರು ಎಂದರೆ ಬೇರೆ ಏನು ಹೇಳದೆ ರಜನಿಕಾಂತ್ ಅವರ ಕಡೆಗೆ ತೋರಿಸುವ ಪ್ರಸಂಗ ಮಂತೆ ಎದುರಾಗಿದೆ. 63 ರ ಹರೆಯದ ರಜನಿಕಾಂತ್ ಅವರು ತಾವು ಎವರ್ ಗ್ರೀನ್ ಸೂಪರ್ ಸ್ಟಾರ್ ಎನ್ನುವುದನ್ನು ಲಿಂಗಾ ಚಿತ್ರದ ಮೂಲಕ ಮತ್ತೆ ಪ್ರಕಟ ಮಾಡಿರುವುದಲ್ಲದೆ ಹಾಲಿವುಡ್ ಸಾಹಸ ನಿರ್ದೇಶಕರ ಗಮನ ಸೆಳೆಯುವಂತೆ ಮತ್ತು ರಜನಿ ಕಾರ್ಯ ವೈಖರಿಗೆ ಬೆರಗಾಗುವಂತೆ ಮಾಡಿದ್ದಾರೆ . ರಜನಿಕಾಂತ್ ಮಾಡಿದ ಆಕ್ಷನ್ ದೃಶ್ಯಗಳನ್ನು ಕಂಡು ಕಾಲಿವುಡ್ ಮೀಡಿಯ ದಂಗಾಗಿವೆ. ಸಾಮಾನ್ಯವಾಗಿ ರಜನಿಕಾಂತ್ ಅವರ ಚಿತ್ರಗಳೆಂದರೆ ಫೈಟ್ಸ್ ಭಿನ್ನವಾಗಿರುತ್ತವೆ. 
 
ಆ ಫೈಟ್ಸ್ ನೋಡಲೆಂದೇ ಅಭಿಮಾನಿಗಳು ಸಿನಿಮಾಕ್ಕೆ ಬರುವುದು. ಅಂತಹ ವಿಶೇಷ ಅಂಶಗಳನ್ನು ಸಹಿತ ಲಿಂಗಾ ಹೊಂದಿದೆಯಂತೆ.ಇದಕ್ಕೆ ಸಂಬಂಧಪಟ್ಟಂತೆ ರಿಹರ್ಸಲ್ ನಡೆಯುತ್ತಿದ್ದು, ಈ ಸಂಗತಿಯನ್ನು ಹಾಲಿವುಡ್   ಫೈಟ್ ಮಾಸ್ಟರ್ ಲೀ ವಿಟ್ಟೆಕರ್ ತಮ್ಮ ಟ್ವಿಟ್ಟರ್  ನಲ್ಲಿ ತಿಳಿಸಿದ್ದಾರೆ. ಇಂತಹ ಡೇರ್ ಅಂಡ್ ಡೆವಿಲ್  ಸಾಹಸವನ್ನು ತಾನು ಈವರೆಗೂ ಡಿಜೈನ್ ಮಾಡಿರಲೇ ಇಲ್ಲ, ಈಗ ಅದಕ್ಕಾಗಿ 4  ಕೆ ಹೈ ಸ್ಪೀಡ್ ಕ್ಯಾಮರ ಬಳಕೆ ಮಾಡಲಾಗುತ್ತಿದ್ದು, ಈ ಸಾಹಸ ದೃಶ್ಯ ಮಾಡಲು ಸಿದ್ಧವಾದ ರಜನಿಯನ್ನು ಹೊಗಳಲು ಪದಗಳೇ ಸಿಗುತ್ತಿಲ್ಲ ಎನ್ನುವ ಮಾತನ್ನು ಅವರು ಹೇಳಿದ್ದಾರೆ. 
 
ಈ ಹಿಂದೆ ಕಮಲ್ ಹಾಸನ್ ವಿಶ್ವರೂಪಂ., ಅಜಿತ್ ಆರಂಭಂ ನಂತಹ ಸಿನಿಮಾಗಳಿಗೆ ಮಾತ್ರ ಸಾಹಸ ಸಂಯೋಜನೆ ಮಾಡಿದ್ದ ವಿಟ್ಟೆಕರ್ ರಜನಿ ಅವರ ಲಿಂಗಾ ಚಿತ್ರಕ್ಕೂ ಸಹಿತ ಸಾಹಸ ದೃಶ್ಯಗಳ ವಿನ್ಯಾಸ  ಮಾಡಿದ್ದಾರೆ.ದೀಪಾವಳಿ ಸಮಯದಲ್ಲಿ ಆಡಿಯೋ ಬಿಡುಗಡೆ ಮತ್ತು ಡಿಸೆಂಬರ್ ನಲ್ಲಿ ರಜನಿಕಾಂತ್ ಅವರ ಹುಟ್ಟು ಹಬ್ಬದ ಸಮಯದಲ್ಲಿ ಚಿತ್ರದ ಬಿಡುಗಡೆ ಮಾಡಬೇಕು ಎಂದು ನಿರ್ಮಾಪಕರು ಯೋಚಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ