ಸಂಜನಾ ಮುಂದಿನ ಚಿತ್ರದಲ್ಲಿ ಐಟಂ ನಂಬರ್ ಆಗಿ ಎಂಟ್ರಿ ?

ಬುಧವಾರ, 24 ಸೆಪ್ಟಂಬರ್ 2014 (10:55 IST)
ಸಂಜನಾ ಗಲ್ರಾಣಿ ಗಂಡ ಹೆಂಡತಿ ಚಿತ್ರದಲ್ಲಿ ಅದ್ಯಾವ ಗಳಿಗೇಲಿ ನಟಿಸಿದರೋ ಏನೋ ? ಕಾಲ ಆಕೆಗೆ ಕೂಡಿ ಬರಲೇ ಇಲ್ಲ. ಯಾವ ಚಿತ್ರವು ಸಹಿತ ಹೇಳಿಕೊಳ್ಳುವಷ್ಟು ಗೆಲುವು ನೀಡಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಆಕೆಯು ನಟಿಸಿರುವ ಚಿತ್ರಗಳ ಸಂಖ್ಯೆ ಹೆಚ್ಚಾಗಿದೆ. ಕೇವಲ ಕನ್ನಡ ಮಾತ್ರವಲ್ಲ ಇತರ ಭಾಷೆಗಳಲ್ಲೂ ಸಹಿತ ತನ್ನ ಪ್ರತಿಭೆ ತೋರಿ ತಾನಿನ್ನು ನಟಿಸುವುದನ್ನು  ಬಿಟ್ಟಿಲ್ಲ ಎಂದು ಜಗತ್ತಿಗೆ ತಿಳಿಸುತ್ತಿದ್ದಾರೆ.  ಈಗ ಮುಂಬೈ ಟು ಮಂಡ್ಯ ಚಿತ್ರದಲ್ಲಿ ಅಲ್ಲದೆ, ಪತ್ರಕರ್ತ  ಗೌರೀಶ್ ಅಕ್ಕಿ ಅವರ ನಿರ್ದೇಶನದ ಸಿನಿಮಾ ಮೈ ಡಾರ್ಲಿಂಗ್ ಚಿತ್ರದಲ್ಲಿ ಹೀರೋಯಿನ್ ಆಗಿದ್ದಾರೆ ಸಂಜನಾ. 
 
ಈ ಚಿತ್ರವು ಚಿತ್ರರಂಗದ ಒಳಗಿನ ಕಥೆಯನ್ನು ತಿಳಿಸುತ್ತದೆ. ಇದರಲ್ಲಿ ಸಂಜನಾ ಸಿನಿ ನಟಿಯ ಪಾತ್ರಧಾರಿಯಾಗಿದ್ದಾರೆ. ಅಂದರೆ ಐಟಂ  ಗರ್ಲ್ಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
 
ಸಿನಿಮಾ ರಂಗದಲ್ಲಿ ನಟಿಯಾಗಲು ಬಯಸಿ ಬಂದ ಹುಡುಗಿ ಅಂತಿಮವಾಗಿ ಐಟಂ ಗರ್ಲ್ ಆಗುತ್ತಾಳೆ. ಅದು  ಹೆಚ್ಚಿನ ಹೆಸರು ತರುವ ವೃತ್ತಿ ಎನ್ನುವ ಕಾರಣದಿಂದ ಅದನ್ನೇ ಆಯ್ಕೆ ಮಾಡಿಕೊಳ್ಳುತ್ತಾಳೆ. ಇಲ್ಲಿ ನಾನು ಟಾಪ್ ಐಟಂ ಗರ್ಲ್ ಪತ್ರದಲ್ಲಿ ನಟಿಸಿದ್ದೇನೆ ಎಂದು ಹೇಳಿದ್ದಾರೆ ಸಂಜನಾ. ಅಂದರೆ ಮಲ್ಲಿಕಾ ಅರೋರ ಖಾನ್‌ನಂತೆ  ತನ್ನ ಪಾತ್ರ ಎಂದು ಹೇಳಿದ್ದಾರೆ. ಈ ಚಿತ್ರದಲ್ಲಿ ವಿಹಾನ್ ಗೌಡ  ಎನ್ನುವ ನವನಟ ಸಂಜನಾ ಜೊತೆಯಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ