ಮಂಡ್ಯ ಬಿಟ್ಟು ಲಂಡನ್ ವಾಸಿಯಾಗುವ ಯೋಜನೆಯಲ್ಲಿ ರಮ್ಯ ?

ಮಂಗಳವಾರ, 21 ಅಕ್ಟೋಬರ್ 2014 (12:18 IST)
ಸ್ಯಾಂಡಲ್ ವುಡ್ ನ ನಟಿ ರಾಜಕಾರಣಿ ರಮ್ಯ ಈಗ ಎಲ್ಲೂ ಕಾಣುತ್ತಿಲ್ಲ. ಆಕೆಯ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು   ಹೊಂದಿದ್ದ ಮಂಡ್ಯ ಜನರಿಗೆ ಸಣ್ಣಮಟ್ಟದ ನಿರಾಸೆ ಆಗಿದೆ. ಅದಕ್ಕೆ ಕಾರಣ ಆಕೆ ಬೆಂಗಳೂರಿನಲ್ಲಿ ಅಲ್ಲ ದೂರದ ಲಂಡನ್ ನಲ್ಲಿ ಹೋಗಿ ನೆಲೆಸಿದ್ದಾಳೆ. ಡಾ. ಶಿವರಾಜ್ ಕುಮಾರ್  ಅವರೊಂದಿಗೆ ಆರ್ಯ ಚಿತ್ರದಲ್ಲಿ ನಟಿಸಿದ ಬಳಿಕ ಆಕೆ ಲಂಡನ್ ಗೆ ಹೋಗಿದ್ದಾಳೆ . ಅಲ್ಲಿ ಆಕೆ ತನ್ನ ಉನ್ನತ ಮಟ್ಟದ ವ್ಯಾಸಂಗ ಮಾಡುತ್ತಿದ್ದಾಳೆ ಎನ್ನುವ ಸುದ್ದಿ ಇದೆ. 
 
ಸುದ್ದಿ ಮೂಲದ ಪ್ರಕಾರ ರಮ್ಯ ಲಂಡನ್‌ನಲ್ಲೇ ಸೆಟಲ್ ಆಗುವ ಎಲ್ಲ ಸಾಧ್ಯತೆಗಳಿವೆ. ಗಾಂಧಿನಗರದಲ್ಲಿ ಹರಡಿರುವ ಸುದ್ದಿ ಪ್ರಕಾರ ಆಕೆ  ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಮತ್ತು ಫೇಸ್ಬುಕ್ ಕಡೆಗೆ ಇತ್ತೀಚೆಗೆ ಸುಳಿದೆ ಇಲ್ಲ. ರಮ್ಯ ಸ್ವಲ್ಪ ದಿನ ಭಾರತಕ್ಕೆ ಬಂದು, ಇಲ್ಲಿ ಮಾಡಬೇಕಾದ ಕೆಲವು ಕೆಲಸಗಳನ್ನು ಪೂರ್ಣಮಾಡಿ ತನ್ನ ತಾಯಿ ಜೊತೆಗೆ ಲಂಡನ್ ಗೆ ಹೋಗಿ ನೆಲೆಸುತ್ತಿದ್ದಾಳಂತೆ . 
 
ಆದರೆ ಎಲ್ಲವು ಗಾಳಿ ಸುದ್ದಿಗಳಾದ್ದರಿಂದ ಯಾವುದೇ ವಿಷಯದಲ್ಲೂ ಸ್ಪಷ್ಟತೆ ಇಲ್ಲ. ಕರ್ನಾಟಕದ ಮೆಚ್ಚಿನ ಕಲಾವಿದೆಯಾದ ರಮ್ಯ ಲಂಡನ್ ನಲ್ಲೆ  ನೆಲೆಸುತ್ತಾಳಾ   .. ಅಥ್ವಾ ಓದು ಪೂರ್ಣ ಆದ ಬಳಿಕ ಇಲ್ಲಿಗೆ ಬಂದು ನೆಲೆಸುತ್ತಾಳಾ  ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ರಮ್ಯನೇ ಉತ್ತರಿಸಬೇಕು.. ಎಲ್ಲಿ ನಮ್ಮ ಗಿಣಿ ಮರಿಯು.. ಮುದ್ದಾಗಿ ಮಾತಾಡ್ತಾ ಇದ್ದ ಗಿಣಿ ಮರಿಯು?
 

ವೆಬ್ದುನಿಯಾವನ್ನು ಓದಿ