ಇಂದು ಫೇರ್ ಅಂಡ್ ಲವ್ಲಿ ತೆರೆಗೆ.. ಶ್ವೇತ -ಪ್ರೇಂ ಮಾಡ್ತಾರ ಜನತೆಗೆ ಮೋಡಿ !

ಶುಕ್ರವಾರ, 24 ಅಕ್ಟೋಬರ್ 2014 (12:28 IST)
ಜೇಡ್ ಪ್ಲಾಂಟ್  ಪತಾಕೆ ಅಡಿಯಲ್ಲಿ ತಯಾರಾಗಿರುವ ಫೇರ್ ಅಂಡ್ ಲವ್ಲಿ ಚಿತ್ರವನ್ನು ದೀಪಾವಳಿಯ ಕಾಣಿಕೆಯಾಗಿ ನೀಡುತ್ತಿದ್ದಾರೆ ನಿರ್ಮಾಪಕಿ ಡಾಕ್ಟರ್  ಶಿಲ್ಪಾ ರಮೇಶ್ ರಮಣಿ .. 7.1 ಸೌಂಡ್ ಅಳವಡಿಸಿದ್ದು, ಇಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. 
 
ಈ ಚಿತ್ರವನ್ನು ನಿರ್ದೇಶಕ ರಘುರಾಮ್ ಅವರು  ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಕಥೆಯನ್ನು  ನೀಡಿದವರು ನಟ ಹಾಗೂ ಪತ್ರಕರ್ತ ಯತಿರಾಜ್. ಚಿತ್ರಕ್ಕೆ ಜಗದೀಶ್ ವಾಲಿ ಅವರ ಛಾಯಾಗ್ರಹಣ ಇದೆ.ಇದರಲ್ಲಿ ಫೇರ್ ಶ್ವೇತ ಶ್ರೀವತ್ಸ ಮತ್ತು ಲವ್ಲಿಯಾಗಿ  ಲವ್ಲಿ ಸ್ಟಾರ್ ಪ್ರೇಂಕುಮಾರ್ ಅಭಿನಯಿಸಿದ್ದಾರೆ. ಹಿರಿಯ ನಿರ್ದೇಶಕ ಡಿ ರಾಜೇಂದ್ರ ಬಾಬು ಅವರ ಪುತ್ರಿ ನಕ್ಷತ್ರ ಒಂದು ಹಾಡಿನಲ್ಲಿ ನಟಿಸಿದ್ದಾರೆ .

 ಸಂಭಾಷಣೆ ಹಾಗೂ ಚಿತ್ರಕತೆ  ಹೊಣೆ ಆನಂದಪ್ರಿಯ ಅವರದ್ದಾಗಿದೆ. ಥ್ರಿಲ್ಲರ್ ಮಂಜು ಹಾಗೂ ಡಿಫರೆಂಟ್ ಡ್ಯಾನಿ ಅವರ ಸಾಹಸ,ಜೋನಿ ಹರ್ಷ ಅವರ ಸಂಕಲನ,ಮದನ್ ಹರಿಣಿ ಹಾಗೂ ಕಲೈ ಅವರ ನೃತ್ಯ ನಿರ್ದೇಶನ ಈ ಚಿತ್ರದ ಮುಖ್ಯ ಅಂಶಗಳಾಗಿವೆ. ಫೇರ್ ಅಂಡ್ ಲವ್ಲಿಯಲ್ಲಿ  ವಿ ಹರಿಕೃಷ್ಣ ಅವರ ಸಂಗೀತ ಸಾಕಷ್ಟು ಜನಪ್ರಿಯತೆ ಪಡೆದಿದೆ.  ನನ್ನೆದೆ ಫೋನು....ಅನಿರೀಕ್ಷಿತ ಲೈಫ್ ಅಲ್ಲಿ....ಹಾಗೆ ಒಂದು ಮಾತು ಹೇಳುವೆ....ಈ ಕಾಣದ ಕಣ್ಣಿಗೆ... ಮುಂತಾದ ಹಾಡುಗಳು ಜನಮನ ಗೆದ್ದಿವೆ.  

ವೆಬ್ದುನಿಯಾವನ್ನು ಓದಿ