ರಕ್ಷಿತ್ ಶೆಟ್ಟಿ ನಿರ್ದೇಶನದ ಉಳಿದವರು ಕಂಡಂತೆ ತಮಿಳು -ಮಲೆಯಾಳಂಗೆ ರೀಮೇಡ್

ಬುಧವಾರ, 29 ಅಕ್ಟೋಬರ್ 2014 (11:40 IST)
ಮೊಟ್ಟ ಮೊದಲ ಬಾರಿಗೆ ನಿರ್ದೇಶಕರಾಗಿ ಕೆಲಸ ಮಾಡಿದ ನಟ ರಕ್ಷಿತ್ ಶೆಟ್ಟಿ ಉಳಿದವರು ಕಂಡಂತೆ ಎನ್ನುವ ಚಿತ್ರವನ್ನು ಜನರ ಕೈಲಿ ಇಟ್ಟರು. ಅವರು ಎಲ್ಲರಿಗೂ ಗೊತ್ತಿರುವಂತೆ ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಚಿತ್ರದಲ್ಲಿ ಯಶಸ್ಸು ನೀಡಿದ ಹೀರೋ. ಈಗ ನಟನೆಯ ಜೊತೆಗೆ ನಿರ್ದೇಶನದತ್ತಲೂ ಕೈ ಚಾಚಿರುವ ಜಾಣ ಕಲಾವಿದ. ಇವರ ಚಿತ್ರವು ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ರೀಮೇಡ್ ಆಗಲು ಸಿದ್ಧ ಆಗುತ್ತಿದೆ.
 
ಕನ್ನಡ ಸಿನಿಮಾ ನಿರ್ಮಾಪಕ ಕೆ. ಮಂಜು ಅವರು ಈಗ ಉಳಿದವರು ಕಂಡಂತೆ ಚಿತ್ರವನ್ನು ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ತಯಾರಿಸುವತ್ತ ಆದ್ಯತೆ ನೀಡಿದ್ದಾರೆ. ಉಳಿದವರು ಕಂಡಂತೆ ಚಿತ್ರದ ರೀಮೇಕ್ ಅಂದರೆ ತಮಿಳಿನಲ್ಲಿ ನಿರ್ಮಿಸಲು ಸ್ಟಾರ್ ನಟನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಇದೆ. 
 
ಪ್ರಸ್ತುತ ರಕ್ಷಿತ್ ಶೆಟ್ಟಿ ರಿಕ್ಕಿ ಎನ್ನುವ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಇದನ್ನು ಎಸ್.ವಿ. ಬಾಬು ಅವರು ನಿರ್ಮಿಸುತ್ತಿದ್ದು, ರಿಷಬ್ ಶೆಟ್ಟಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇವರು ಯಕ್ಕ ರಾಜ ರಾಣಿಯ ಶಶಿಕಾಂತ್ ಪಾತ್ರಧಾರಿ. ಈಗ ಎರಡು ಪ್ರಾಜಕ್ಟ್ ರಕ್ಷಿತ್ ಕೈಲ್ಲಿದ್ದು  , ಅವುಗಳು ಪೂರ್ಣ ಆದ ಬಳಿಕ ಕಿಚ್ಚ ಸುದೀಪ್ ಅವರ ನಟನೆಯ ಚಿತ್ರವನ್ನು ನಿರ್ದೇಶನ ಮಾಡುವುದಕ್ಕೆ ಸಿದ್ಧತೆ ನಡಿಸಿದ್ದಾರೆ. ಆ ಚಿತ್ರದ ಹೆಸರು ಟಗ್ಸ್ಆಫ್ ಮಾಲ್ಗುಡೀಸ್. 
 

ವೆಬ್ದುನಿಯಾವನ್ನು ಓದಿ