ಇಂದು ಲಕ್ಷ ದೀಪಗಳ ಬೆಳಕಲ್ಲಿ ಡಾ. ರಾಜ್ ಕುಮಾರ್ ಸ್ಮಾರಕ

ಶುಕ್ರವಾರ, 31 ಅಕ್ಟೋಬರ್ 2014 (10:51 IST)
ಇಂದು ಡಾ. ರಾಜ್ ಕುಮಾರ್ ಅವರ ಸ್ಮಾರಕವು ದೀಪಗಳಿಂದ ಜಗಮಗಿಸುತ್ತದೆ. ಅಂದರೆ ಲೋಕಾರ್ಪಣೆಗೆ ಸಿದ್ಧ ಆಗಿರುವ ಅಣ್ಣಾವ್ರ ಸ್ಮಾರಕದಲ್ಲಿ ಒಂದು ಲಕ್ಷ ದೀಪಗಳು ಬೆಳಕನ್ನು ಚೆಲ್ಲಲಿದೆ. ಕನ್ನಡ ರಾಜ್ಯೋತ್ಸವದ ಕಾರಣದಿಂದ ಅವರ ಅಭಿಮಾನಿಗಳು ಈ ರೀತಿಯ ನಿರ್ಧಾರಕ್ಕೆ ಬಂದಿದ್ದಾರೆ. ನವೆಂಬರ್ 29  ರಂದು ಈ ಸ್ಮಾರಕವು ಲೋಕಾರ್ಪಣೆ  ಆಗಲಿದೆ.

ಅಂದು ಭಾರತೀಯ ಚಿತ್ರರಂಗದ ಗಣ್ಯಾತಿಗಣ್ಯರು ಭಾಗವಹಿಸಿ ಕಾರ್ಯಕ್ರಮದ  ಸೊಬಗನ್ನು ಹೆಚ್ಚಿಸಲಿದ್ದಾರೆ. ಸುಮಾರು ಏಳು ಕೋಟಿ ರೂಪಾಯಿಗಳ ವೆಚ್ಚದಲ್ಲಿ ತಯಾರಾಗಿರುವ ಈ ಸ್ಮಾರಕವು ಇಂದು ಕಾರ್ತಿಕ ಮಾಸದ ದೀಪಗಳಿಂದ ಕಂಗೊಳಿಸಲಿದೆ. ಲೋಕಾರ್ಪಣೆ ಕಾರ್ಯಕ್ರಮ ಸಂಪೂರ್ಣವಾಗಿ ಸರ್ಕಾರಿ ಕಾರ್ಯಕ್ರಮ, ಆದರೆ ಲಕ್ಷ  ದೀಪಗಳು ಸಂಪೂರ್ಣವಾಗಿ ಅಣ್ಣಾವರ ಅಭಿಮಾನಿಗಳ ಸೇವೆ.

ಈಗ ಡಾ. ರಾಜ್ ಕುಮಾರ್ ಅವರ ಸ್ಮಾರಕವು ದೇಗುಲದಂತೆ ಸಿದ್ಧವಾಗುತ್ತಿದೆ. ಅಲ್ಲಿ ಅವರ ಸ್ಮಾರಕ ನೋಡಲು ಸಾವಿರಾರು ಜನ ಪ್ರವಾಸಿಗರು ಬರುತ್ತಿರುತ್ತಾರೆ. ಈಗ ಮತ್ತಷ್ಟು ಭಿನ್ನವಾಗಿ ಸ್ಮಾರಕವು ಸಿದ್ಧ ಆದಕಾರಣ ಅದರ ಬಗ್ಗೆ ಹೆಚ್ಚು ಹೆಚ್ಚು ಜನರು ಆಕರ್ಷಿತರಾಗುವುದರಲ್ಲಿ  ಸಂಶಯವೇ ಇಲ್ಲ.

ವೆಬ್ದುನಿಯಾವನ್ನು ಓದಿ