ಸೆಕ್ಸ್ ಹಾಗೆಂದರೇನು, ನನಗಿನ್ನೂ ಅದರ ಅನುಭವ ಆಗಿಲ್ಲ ಎಂದಿರುವ ಸೆಕ್ಸಿ ಆಲಿಯ

ಮಂಗಳವಾರ, 4 ನವೆಂಬರ್ 2014 (10:51 IST)
ಆಲಿಯಾ ಭಟ್ ಬಾಲಿವುಡ್ ನ ಮುದ್ದಿನ ಹಾಟೆಸ್ಟ್ ನಟಿ. 21ರ ಹರೆಯದ ಆಲಿಯಾ  ತಾನೆಷ್ಟು ಮುದ್ದಾಗಿದ್ದಾಳೋ ಅಷ್ಟೇ ಮುದ್ದಾಗಿ ನಟಿಸುವ ಈ ಚೆಲುವೆ ಮಾಡಿರುವ ಚಿತ್ರಗಳು ಬೆರಳೆಣಿಕೆಯಷ್ಟು ಮಾತ್ರ. ಆದರೆ ಪಡೆದ ಖ್ಯಾತಿ ಮಾತ್ರ ಅಪಾರ. ಅದಕ್ಕೆ ಕಾರಣ ಆಕೆಯ ಪೆದ್ದುತನದ ಬಗ್ಗೆ ಹರಡಿರುವ ಅನೇಕ ಸಂಗತಿಗಳು. ಆಕೆಯ ಬೋಲ್ಡ್ ನೆಸ್  ಮತ್ತು ಅವಳ ಬಾಯ್ ಫ್ರೆಂಡ್ ಡೇಟಿಂಗ್ ಹೀಗೆ ಹತ್ತು ಹಲವಾರು ಸಂಗತಿಗಳ ಕುರಿತಾದ ಕೆಲವು ಅಂಶಗಳು.

ಆಲಿಯ ಸದಾ ಸುದ್ದಿಯಲ್ಲಿರುವ ಚೆಲುವೆ. ತನ್ನ ಸಹನರಾದ ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರ ಅವರೊಂದಿಗೆ ಡೇಟಿಂಗ್ ಮಾಡಿದರು  ಹಾಗೇನು ಇಲ್ಲ ನಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಎಂದು ಹೇಳಿ ತನ್ನ ಮೇಲೆ ಹರಡಿದ್ದ ಸುದ್ದಿಯನ್ನು ಬೆಳೆಯಲು ಬಿಟ್ಟಿರಲಿಲ್ಲ. ಆಕೆ ಬಗ್ಗೆ ಅನೇಕ ಸಂಗತಿಗಳು ಸದಾ ಸುದ್ದಿಯಲ್ಲಿ ಇರುತ್ತದೆ ಅದರಲ್ಲಿ ಒಂದು ಈಗ ಹೆಚ್ಚು ದೊಡ್ಡ ಸುದ್ದಿ ಆಗಿದೆ ಬಿ ಟೌನ್ ನಲ್ಲಿ. ಸೆಕ್ಸ್ ಬಗ್ಗೆ ಆಕೆ ಮಾತನಾಡುತ್ತ , ಸೆಕ್ಸ್ ನ್ನು ಭೂತಕನ್ನಡಿಯಲ್ಲಿ ನೋಡದಿರಿ.

ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ವೈಯಕ್ತಿಕ ಸಂಗತಿ ಇದು. ಇದರ ಬಗ್ಗೆ ಅದ್ಯಾಕೆ ಮಾಧ್ಯಮದವರು ಇಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಮುಖ್ಯವಾಗಿ ಪ್ರೀತಿ , ಕಾಮ ಅನ್ನೋದು ಸಂಪೂರ್ಣವಾಗಿ  ವೈಯಕ್ತಿಕ, ಇದನ್ನು ರಾಷ್ಟ್ರಿಯ ಸುದ್ದಿಯಾಗಿ ಮಾಡುವ ಪರಿ ಆಶ್ಚರ್ಯ ತರಿಸುತ್ತದೆ ತನಗೆ ಎಂದು ಹೇಳಿದ್ದಾಳೆ. ಅಷ್ಟೇ ಅಲ್ಲದೆ ತನಗೆ ಸೆಕ್ಸ್ ಬಗ್ಗೆ ಯಾವುದೇ ರೀತಿ ಅರಿವು ಇಲ್ಲ, ತಾನಿನ್ನು ಅದರ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾಳೆ. ಈ ಮಾತು ಮಾತ್ರ ಮಾಧ್ಯಮಗಳಲ್ಲಿ  ಹೆಡ್ ಲೈನ್ ಆಗಿದೆ ಎನ್ನುವುದನ್ನು ನಾವು ವಿವರಿಸಿ ಹೇಳ ಬೇಕಿಲ್ಲ ! 

ವೆಬ್ದುನಿಯಾವನ್ನು ಓದಿ