ಸಾಮಾನ್ಯವಾಗಿ ಕೆಲವೊಂದು ಚಿತ್ರಗಳು ಬಿಡುಗಡೆಗೆ ಮುನ್ನ ಸಾಕಷ್ಟು ಸುದ್ದಿ ಮಾಡುತ್ತಿರುತ್ತದೆ. ಅದಕ್ಕೆ ಕಾರಣಗಳು ಹಲವಾರು. ಈಗ ರಾಕ್ಲೈನ್ ವೆಂಕಟೇಶ್ ಅವರು ನಿರ್ಮಾಣ ಮಾಡುತ್ತಿರುವ , ಕೆ ಎಸ್ ರವಿಕುಮಾರ್ ಅವರ ನಿರ್ದೇಶನದ ಲಿಂಗಾ ಚಿತ್ರವೂ ಸಹ ಅಂತ ಒಂದು ಸುದ್ದಿಯಿಂದ ಎಲ್ಲರ ಗಮನ ಸೆಳೆದಿದೆ. ಸುಪರ್ ಸ್ಟಾರ್ ರಜನಿಕಾಂತ್ ಅವರ ಅಭಿನಯದ ಬಹುನಿರೀಕ್ಷಿತ ಚಿತ್ರ ಲಿಂಗಾ ದಲ್ಲಿ ಅನುಷ್ಕ ಶೆಟ್ಟಿ ಹಾಗೂ ಸೋನಾಕ್ಷಿ ಸಿನ್ಹ ಮುಖ್ಯ ಪಾತ್ರಧಾರಿಯಾಗಿದ್ದಾರೆ.