ವಿದೇಶಿಗರ ನಡುವೆ ಸ್ವದೇಶಿ ಶುದ್ಧಿಯಲ್ಲಿ ನಿವೇದಿತಾ

ಶುಕ್ರವಾರ, 14 ನವೆಂಬರ್ 2014 (12:31 IST)
ಈಗ ಎಲ್ಲಿ ನೋಡಿದರು ಮಹಿಳೆಯ ಮೇಲೆ ಅತ್ಯಾಚಾರ, ದೌರ್ಜನ್ಯ. ಕೇವಲ ಹೆಂಗಸರ ಮೇಲೆ ಮಾತ್ರವಲ್ಲ, ಪುಟ್ಟ ವಯಸ್ಸಿನ ಹೆಣ್ಣು ಮಕ್ಕಳನ್ನು ಸಹಿತ ಕಾಮುಕರು ಬಿಡುತ್ತಿಲ್ಲ. ಇಂತಹ ಕಥಾಹಂದರ ಹೊಂದಿರುವ ಚಿತ್ರವೊಂದು ಸಿದ್ಧ ಆಗುತ್ತಿದೆ ಅದರ ಹೆಸರು ಶುದ್ಧಿ. ಈ ಚಿತ್ರದಲ್ಲಿ ಕನ್ನಡದ ಹಾಟ್ ತಾರೆ ನಿವೇದಿತಾ ಮುಖ್ಯ ಪಾತ್ರಧಾರಿ ಆಗಿದ್ದಾರೆ. ಈಕೆ ಇದರಲ್ಲಿ ಪತ್ರಕರ್ತೆಯ ಪಾತ್ರ ಮಾಡುತ್ತಿದ್ದಾರಂತೆ.

 
ಆಕೆಯ ಜೊತೆ ಅಮೃತ ಮತ್ತು ಲಾರೆನ್ ಎನ್ನುವ ವಿದೇಶಿ ಹೆಣ್ಣುಮಗಳು ಸಹಿತ ಅಭಿನಯಿಸುತ್ತಿದ್ದಾರೆ.  ಚಿತ್ರದ ನಿರ್ದೇಶನವನ್ನು ಆದರ್ಶ್ ಅವರು ಮಾಡುತ್ತಿದ್ದಾರೆ. ಭಾರತ ಹಾಗೂ ಅಮೇರಿಕ ದೇಶಗಳೆರಡು  ಒಂದೇ ರೀತಿಯ ಜ್ವಲಂತ ಸಮಸ್ಯೆ ಹೊಂದಿದ್ದು ಆ ಕಾರಣದಿಂದ ಚಿತ್ರಕ್ಕೆ ವಿದೇಶಿಯರನ್ನು ಸೇರ್ಪಡೆ ಮಾಡಿಕೊಂಡಿದ್ದಾರಂತೆ ಚಿತ್ರ ಮಂದಿ. ಹಾಗಂತ ಆದರ್ಶ್ ಹೇಳಿದ್ದಾರೆ.

ಹಾಲಿವುಡ್ ನ ಕ್ಯಾಮರಾಮನ್ ಆಂಡ್ರೂ ಆಯಿಲೋ ಈ ಚಿತ್ರಕ್ಕೆ ಕ್ಯಾಮರ ವರ್ಕ್ ಮಾಡುತ್ತಿದ್ದಾರೆ. ಈಗಾಗಲೇ ಆಂಡ್ರೂ ಅನೇಕ ಪ್ರಸಿದ್ಧರ ಕೈಕೆಳಗೆ ದುಡಿದ ಅನುಭವ ಹೊಂದಿದ್ದಾರಂತೆ. ಕೇವಲ ಸೀರಿಯಸ್ ಮ್ಯಾಟರ್ ಅಲ್ಲದೆ ಕಥೆಯಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳು ಸಹಿತ ಇದೆಯಂತೆ. ನಿವೇದಿತ ಇರುವುದರಿಂದ ಗ್ಲಾಮರ್‌ಗೂ ಏನು ಕೊರತೆ ಇರದು. ಆಕೆ ನಟನೆಯ ಜೊತೆಗೆ ಬಿಚ್ಚುವಿಕೆಯಲ್ಲಿ ಬೇಸರ ತೋರದ ಕಾರಣ ಎರಡು ಸಂಗತಿಗಳ ನೈಪುಣ್ಯ ಈ ಚಿತ್ರದಲ್ಲಿ ಕಾಣಬಹುದಾಗಿದೆ. 

ವೆಬ್ದುನಿಯಾವನ್ನು ಓದಿ