8.40 ಕೋಟಿ ವಿದೇಶಿ ಹಕ್ಕಿನ ದಾಖಲೆಯಲ್ಲಿ ರಜನಿಕಾಂತ್ ಲಿಂಗಾ ಚಿತ್ರ

ಗುರುವಾರ, 20 ನವೆಂಬರ್ 2014 (11:09 IST)
ಭಾರತೀಯ ಚಿತ್ರರಂಗದಲ್ಲಿ ಈಗ ದಕ್ಷಿಣ ಭಾರತದ ಚಿತ್ರಗಳು ಬಾಲಿವುಡ್ ಮಂದಿಯ ಗಮನ ಸೆಳೆದು ಅದು ರೀಮೇಕ್ ಆಗುತ್ತಿದೆ. ಅಷ್ಟೇ ಅಲ್ಲದೆ ಆ ಚಿತ್ರಗಳು ಬಾಲಿವುಡ್ ಬಾಕ್ಸಾಫೀಸನ್ನು ಕೊಳ್ಳೆ ಹೊಡೆಯುತ್ತಿದೆ.
 
ಆದ್ದರಿಂದ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿ ಬಗ್ಗೆ ಹೆಚ್ಚು ಆದ್ಯತೆ ನೀಡಲು ಆರಂಭ ಮಾಡಿದ್ದಾರೆ ಬಾಲಿವುಡ್ ಮಂದಿ. ರಜನಿಕಾಂತ್ ಅವರ ಅಭಿನಯದ ಹೊಸ ಚಿತ್ರ ಲಿಂಗಾದಲ್ಲಿ ಸೋನಾಕ್ಷಿ ಸಿನ್ಹ ಮತ್ತು ಅನುಷ್ಕ ಶೆಟ್ಟಿ ರಜನಿ ಅವರ ಜೊತೆ ಆಗಿದ್ದಾರೆ. ದ್ವಿಪಾತ್ರಧಾರಿ ಆಗಿರುವ ರಜನಿಕಾಂತ್  ಅವರ ಚಿತ್ರ ಬಿಡುಗಡೆಗೆ ಮುನ್ನ ನಡೆಯುವ ವಿತರಣೆಯ ಹಕ್ಕಿಗೆ ಸಂಬಂಧಪಟ್ಟಂತೆ ಭಾರಿ ಪ್ರಮಾಣದಲ್ಲಿ ಮಾತುಕತೆಗಳು ನಡೆದಿದ್ದು ಎಲ್ಲರೂ ಆ ಚಿತ್ರದ ಬಗ್ಗೆ ಹೊಸ ಭರವಸೆಗಳನ್ನು   ಹೊಂದುವಂತೆ ಮಾಡಿದೆ. 
 
ಇತ್ತೀಚಿಗೆ ನಡೆದ ವಿದೇಶಿ ವಿತರಣ ಹಕ್ಕುಗಳು ಸಹಿತ ಹೆಚ್ಚಿನ ಸುದ್ದಿ ಮಾಡಿದೆ. 
ಈ ಚಿತ್ರದ ಓವರ್ಸೀಸ್ ರೈಟ್  ಎಂಟು ಕೋಟಿ   ನಲವತ್ತು ಲಕ್ಷಕ್ಕೆ ಮಾರಾಟವಾಗಿದೆ.ಆರಂಭಿಕ ಹಂತದಲ್ಲಿ ಏಳು ಕೋಟಿ ಇದ್ದು ಆನಂತರ ಅದರ ಬೆಲೆ 8.40 ಕೋಟಿ ರೂಗಳಿಗೆ  ಏರಿದೆ.  
ಸುಮಾರು ನಾಲ್ಕು ವರ್ಷಗಳ ನಂತರ ರಜನಿ ಅವರು ಲೈವ್ ಆಕ್ಷನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರವನ್ನು ಕೆ. ಎಸ್ ರವಿಕುಮಾರ್ ಅವರು ನಿರ್ದೇಶಿಸಿದ್ದಾರೆ. ರಾಕ್ಲೈನ್ ವೆಂಕಟೇಶ್ ಅವರು ನಿರ್ಮಾಣ ಮಾಡಿದ್ದಾರೆ. 
 

ವೆಬ್ದುನಿಯಾವನ್ನು ಓದಿ