ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಮೀರಿಸಿದ ಪ್ರಿನ್ಸ್ ಮಹೇಶ್ ಬಾಬು..

ಗುರುವಾರ, 20 ನವೆಂಬರ್ 2014 (11:11 IST)
ಭಾರತೀಯ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಗಳಲ್ಲಿ   ಸೂಪರ್ ಸ್ಟಾರ್ ಆಗಿರುವವರು ಕೆಲವರು ಮಾತ್ರ. ಅಂತಹವರಲ್ಲಿ ರಜನಿಕಾಂತ್ ಸಹ ಒಬ್ಬರು. ಅವರ ಬಗ್ಗೆ ಹೇಳುವಷ್ಟಿಲ್ಲ ಅಷ್ಟೊಂದು ಜನಪ್ರಿಯ ವ್ಯಕ್ತಿ. ಅವರೊಂದಿಗೆ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಆದರೂ ಒಂದು ವಿಷಯದಲ್ಲಿ ಮಾತ್ರ ರಜನಿಕಾಂತ್ ಅವರಿಗಿಂತ ಮೇಲಿದ್ದಾರೆ ಮಹೇಶ್ ಬಾಬು. ಈ ಸಂಗತಿ ಆವರ  ಅಭಿಮಾನಿಗಳ ಗಮನಕ್ಕೆ ಬಂದಿದ್ದು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಹಿರಿಮೆಯನ್ನು ಕೊಂಡಾಡುತ್ತಿದ್ದಾರೆ. 
 
ರಜನಿಕಾಂತ್ ಲಿಂಗಾ ಸಿನಿಮಾವನ್ನು ಈ ರೋಸ್ ಸಂಸ್ಥೆ ವಿತರಣೆ ಮಾಡುತ್ತಿದೆ ವಿಶ್ವಾದ್ಯಂತ ಅದೂ 165  ಕೋಟಿಗಳ ಮೊತ್ತದಿಂದ. ಈ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಆದರೆ ಇಂತ ಬೃಹತ್ ಮಾರುಕಟ್ಟೆಯನ್ನು ನಿರ್ಮಿಸುತ್ತಿರುವ ಲಿಂಗಾ ಚಿತ್ರದ  ತಮಿಳು , ತೆಲುಗು ಭಾಷೆಗಳಿಗೆ ಸಂಬಂಧಪಟ್ಟಂತೆ ಓವರ್ಸೀಸ್ ಹಕ್ಕುಗಳು ಎಂಟು ಕೋಟಿ  ನಲವತ್ತು  ಲಕ್ಷಕ್ಕೆ ಮಾರಾಟ ಆಗಿದೆ.ರಜನಿಕಾಂತ್ ಅವರು ಈವರೆಗೂ ನಟಿಸಿರುವ ಚಿತ್ರಗಳ ವಿದೇಶಿ ಹಕ್ಕುಗಳಲ್ಲಿ ಇದೆ ಅಧಿಕ ಮೊತ್ತ ಪಡೆದಿರುವುದು. 
 
ಆದರೆ ರಜನಿಗಿಂತ ಸಾಧನೆಯಲ್ಲಿ ವಯಸ್ಸಿನಲ್ಲಿ ಕಾಲು ಭಾಗದಷ್ಟಿರುವ ಮಹೇಶ್ ಬಾಬು ಅವರ ಆಗಡು ಚಿತ್ರದ ವಿದೇಶಿ ವಿತರಣಾ ಹಕ್ಕುಗಳು ಸುಮಾರು ಒಂಬತ್ತು ಕೋಟಿ ರೂಪಾಯಿಗಳಿ ಮಾರಾಟ ಆಗಿದ್ದ ಸುದ್ದಿ ಈಗ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಮಹೇಶ್ ಬಾಬು ಮಾಡಿದ ಈ ಸಾಧನೆ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೂ ಮಾಡಲು ಆಗಿಲ್ಲ ಎನ್ನುವ ಅಂಶ ಮುಂದಿಟ್ಟು ಮಹೇಶ್ ಅವರನ್ನು ಹೆಚ್ಚು ಹೊಗಳುತ್ತಿದ್ದಾರೆ ಅವರ ಅಭಿಮಾನಿಗಳು. ಆದರೆ  ಲಿಂಗಾ ಚಿತ್ರದ ಬಿಡುಗಡೆಯ ಬಳಿಕ ಪಡೆಯುವ  ಕಲೆಕ್ಷನ್ ಭಾರಿ ಆಗಿದ್ದು ಅದರ ಮುಂದೆ ಮಹೇಶ್ ವಿಷ್ಯ ಏನೇನು  ಅಲ್ಲ ಎನ್ನುವ ಸಂಗತಿಯನ್ನು ಅವರ ಅಭಿಮಾನಿಗಳು ಅರ್ಥ ಮಾಡಿಕೊಳ್ಳ ಬೇಕಿದೆ. 

ವೆಬ್ದುನಿಯಾವನ್ನು ಓದಿ