ಮಾಲ್ಡೀವ್ಸ್ ನಲ್ಲಿ ನಯತಾರ ಹುಟ್ಟುಹಬ್ಬದ ಸಂಭ್ರಮ

ಶನಿವಾರ, 22 ನವೆಂಬರ್ 2014 (13:15 IST)
ರಾಣಿ ಬಯಸಿದರೆ ಸ್ವರ್ಗವೇ ಕಾಲು ಬುಡಕ್ಕೆ ಬಂದು ಬೀಳುತ್ತದೆ ಎನ್ನುವ ಮಾತಿದೆ. ಅಂತಹ ಮಾತು ನಟಿ ನಯನತಾರಗೆ ಅನ್ವಯ ಆಗುತ್ತದೆ. ದಕ್ಷಿಣ ಭಾರತದ ಹೆಮ್ಮೆಯ ನಟಿ ಹಾಗೂ ನಂಬರ್ ಒನ್ ತಾರೆ ನಯನತಾರ. ತನ್ನ ವಯಕ್ತಿಕ ಬದುಕಿನಲ್ಲಿ ಆದ ಅವಘಡಗಳಿಂದ ಬೇಸತ್ತ ಆಕೆ ಈಗ ತನ ಗಮನ ನೆಟ್ಟಿರುವುದು ಸಿನಿಮಾಗಳತ್ತ. ಈಗ ನಯನ್ ಸಿನಿಮಾ ಬಿಟ್ರೆ ಮತ್ತೇನು ಯೋಚಿಸೋಲ್ಲ.
 
 ಇಂತಹ ಸುಂದರಿಯ ಬದುಕಲ್ಲಿ ಪ್ರತಿವರ್ಷ ಎಲ್ಲರಿಗೂ ಬರುವಂತೆ ಹುಟ್ಟು ಹಬ್ಬದ ದಿನ ಬಂದಿದೆ. ಆದರೆ ಸಾಮಾನ್ಯರಂತೆ ಆಕೆ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಸಾಧ್ಯ ಇಲ್ಲ. ಈ ಬಾರಿ ನಯನ್ ಮಾಲ್ಡೀವ್ಸ್ ನಲ್ಲಿ ತನ್ನ ಕುಟುಂಬ ಸದಸ್ಯರ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾಳೆ. ಅದಕ್ಕೆಂದು ಆಕೆ ಎರಡು ದಿನಗಳ ಕಾಲ ಮಾಲ್ಡೀವ್ಸ್ ಗೆ ಹೋಗುತ್ತಿದ್ದಾಳೆ. 
 
 ಶಿಂಬು ಜೊತೆ ಇದು ನಮ್ಮ ಆಳು, ಉದಯ ನಿಧಿ ಸ್ಟಾಲಿನ್ ಜೊತೆ ನನ್ಭಂಡಾ, ಜಯಂ ರವಿ ಜೊತೆ ತನಿ ಒರುವನ್, ಸೂರ್ಯ ಜೊತೆ ಮಾಸ್ , ಆದಿಯೊಂದಿಗೆ ಒಂದು ಸಿನಿಮಾ, ವಿಜಯ್ ಸೇತುಪತಿ ಜೋಡಿಯಾಗಿ ಮತ್ತೊಂದು ಚಿತ್ರ ಹೀಗೆ ಬಿಡುವುಗೆಟ್ಟು ದುಡಿಯುತ್ತಿದ್ದಾಳೆ. ಈ ನಡುವೆ ತನ್ನ ಎಲ್ಲ ಕೆಲಸಕ್ಕೆ ಆಕೆ ವಿಶ್ರಾಂತಿ ಪಡೆಯುವ ಕಾರಣದಿಂದ ಮಾಲ್ಡೀವ್ಸ್ ಗೆ ಹೋಗುತ್ತಿದ್ದಾಳೆ. ಈಕೆ ಜೊತೆ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಹೋಗಿ ಅಲ್ಲಿ ಈಕೆಯ ಹುಟ್ಟುಹಬ್ಬ ಆಚರಿಸುತ್ತಾರೆ. 
 

ವೆಬ್ದುನಿಯಾವನ್ನು ಓದಿ