ಹೆಸರು ಬದಲಿಸಿಕೊಳ್ಳುತ್ತಿರುವ ರಿಂಗ್ ರೋಡ್ ಶುಭ

ಶನಿವಾರ, 10 ಜನವರಿ 2015 (14:04 IST)
ಪ್ರಿಯ ಬೆಳ್ಳಿಯಪ್ಪ ಎನ್ನುವ ಮಹಿಳಾ ನಿರ್ದೇಶಕಿಯ ನಿರ್ದೇಶನದಲ್ಲಿ ಹೊರ ಬರುತ್ತಿರುವ ಚಿತ್ರ ರಿಂಗ್ ರೋಡ್ ಶುಭ. ಅದರಲ್ಲಿ ಹಿರಿಯ ನಟ ದುನಿಯಾ ವಿಜಯ್, ನಟಿ ನಿಖಿತ ತುಕ್ರಾಲ್ ಸೇರಿದಂತೆ ಹಲವರು ನಟಿಸಿದ್ದಾರೆ. ತನ್ನ ಪ್ರೀತಿಗಾಗಿ ಮದುವೆ ಆಗಲು ಸಿದ್ಧವಾಗಿದ್ದ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿಯನ್ನು ಭೀಕರವಾಗಿ ಕೊಂದ ಶುಭಾಳ ನೈಜ ಬದುಕಿನ ಕಥೆಯನ್ನು ಆಧರಿಸಿದೆ ಈ ಚಿತ್ರ.

ಇದರ   ಹೀರೋಯಿನ್‌ಳನ್ನು ಟೀವಿ ಮೂಲಕ ಆಯ್ಕೆ ಮಾಡಲಾಗಿದೆ. ಸಾಕಷ್ಟು ಸುದ್ದಿ ಮಾಡಿರುವ ಈ ಚಿತ್ರದ ಬಗ್ಗೆ ತುಂಬಾ ಕುತೂಹಲವಿದೆ. ಡಿಸೆಂಬರ್ 22  ರಂದು ಸೆನ್ಸಾರ್ ಮಂಡಳಿ ಮುಂದೆ ಬಂದ ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಂಡಳಿಯವರು, ಸಿನಿಮಾದ ಹೆಸರು ಬದಲಾಯಿಸುವಂತೆ ಸೂಚಿಸಿದ್ದಾರಂತೆ.

ಅದು ಶೋಭಾ ಅಥವಾ ಸುಮಾ ಆಗಿ ಬದಲಾಗುವ ಸಾಧ್ಯತೆ ಇದ್ದು, ಡಬ್ಬಿಂಗ್ ಸಮಯದಲ್ಲಿ ಯಾವುದೇ ವ್ಯತ್ಯಾಸ ಆಗಲ್ಲ ಎಂದು ಹೇಳಿದ್ದಾರೆ ನಿರ್ದೇಶಕಿ. ಒಟ್ಟಾರೆ ಯಾವುದೇ ರೀತಿಯ ತೊಂದರೆ ತಕರಾರು ಎದುರಾಗ ಬಾರದು ಎಂದು ನಿರ್ದೇಶಕಿ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದಾಯ್ತು.

ಈಗಾಗಲೇ ಇದು ಹಲವು ನಟ ನಟಿಯರ ವೈಯಕ್ತಿಕ ಬದುಕಿಗೂ ಸಂಬಂಧಪಟ್ಟಿದೆ ಎನ್ನುವ  ಗುಸುಗುಸು ಇದ್ದು, ಅದೂ ಸಹಿತ ವಿವಾದ ಉಂಟು ಮಾಡ ಬಹುದು ಎನ್ನುವ ಉದ್ದೇಶ
ದಿಂದ ಈ ರೀತಿಯ ನಿರ್ಧಾರ ಕೈ ಗೊಂಡಿದ್ದಾರೆ ನಿರ್ದೇಶಕಿ.  
 

ವೆಬ್ದುನಿಯಾವನ್ನು ಓದಿ