ಪೂಜಾ ತಿಪ್ಪಜ್ಜಿಗೆ ಯು/ ಎ ಸರ್ಟಿಫಿಕೇಟ್ ಸಿಕ್ತು..

ಸೋಮವಾರ, 12 ಜನವರಿ 2015 (12:52 IST)
ಪೂಜಾ ಗಾಂಧಿ ಮುಖ್ಯ ಪಾತ್ರಧಾರಿಯಾಗಿರುವ ಚಿತ್ರ ತಿಪ್ಪಜ್ಜಿ ಸರ್ಕಲ್. ದೇವದಾಸಿ ಒಬ್ಬರ ನಿಜ ಬದುಕಿನ ಕಥೆಯಾಗಿರುವ ತಿಪ್ಪಜ್ಜಿ ಸರ್ಕಲ್ ನಲ್ಲಿ ಪೂಜಾ ತಿಪ್ಪಜ್ಜಿ ಪಾತ್ರಧಾರಿ ಆಗಿದ್ದಾರೆ. ಈ ಚಿತ್ರಕ್ಕೆ ಈಗ ಸೆನ್ಸಾರ್ ಮಂಡಳಿ   ಕಡೆಯಿಂದ ಸಮ್ಮತಿ ಸಿಕ್ಕಿದೆ.

ಇನ್ನು ಇದನ್ನು ಬಿಡುಗಡೆ ಮಾಡುವ ಕೆಲಸ ಬಾಕಿ ಉಳಿದಿದೆ. ಆದಿತ್ಯ ಚಿಕ್ಕಣ್ಣ ಇದನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ದೇವದಾಸಿ ಪದ್ಧತಿಯ ಕರಾಳ ನೆರಳಿನಿಂದ  ಬಳಲುವ ಹೆಣ್ಣುಮಗಳ ಚಿತ್ರಣ ನೀಡಲಾಗಿದೆ. ದೇವದಾಸಿ ಪದ್ಧತಿಯ ವಿರುದ್ಧ ಹೋರಾಡುವ ಹೆಣ್ಣಾಗಿದ್ದಾರೆ ಪೂಜಾಗಾಂಧಿ. 
 
ಸಮಾಜದ ಪಿಡುಗಿನ ಬಗ್ಗೆ ಹೋರಾಡುವ ಅಂಶಕ್ಕೆ ತಮ್ಮ ಚಿತ್ರದಲ್ಲಿ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ ಆದಿತ್ಯ ಚಿಕ್ಕಣ್ಣ. ತಿಪ್ಪಜ್ಜಿ ಈ ಪಿಡುಗಿನಿಂದ ದೂರವಾಗಲು ಪೂರಕ ಹೋರಾಟ ಮಾಡಿ ತನ್ನ  ಹೆಣ್ಣುಮಕ್ಕಳನ್ನು ಇದರಿಂದ ವಿಮುಕ್ತಿ ಗೊಳಿಸಿದ್ದು ಇದರ ಮುಖ್ಯ ಅಂಶಗಳು ಎಂದು ಹೇಳಿದ್ದಾರೆ ನಿರ್ದೇಶಕರು. 
 
ಆರಂಭದಲ್ಲಿ ತಿಪ್ಪಜ್ಜಿ ಮನೆಯವರು ಸಹಕಾರ ನೀಡಲು ಇಷ್ಟ ಪಡಲಿಲ್ಲ. ಆದರೆ ತಾನು ಈ ಚಿತ್ರದಲ್ಲಿ ಅತ್ಯುತ್ತಮ ಅಂಶಗಳನ್ನು ಪ್ರದರ್ಶಿಸುತ್ತೇನೆ ಎಂದಾಗ ಮಾತ್ರ ಸಮ್ಮತಿ ಮುದ್ರೆ ನೀಡಿದರಂತೆ.
 
ಈ ಚಿತ್ರಕ್ಕೆ ಈಗ ಯು/ ಎ  ಸರ್ಟಿಫಿಕೇಟ್ ದೊರೆತಿದೆ. ಇದನ್ನು ಸಧ್ಯದಲ್ಲೇ ಜನರ ಮುಂದೆ ತರಲಾಗುತ್ತದೆ ಎಂದು ಹೇಳಿದ್ದಾರೆ ನಿರ್ದೇಶಕರು. 

ವೆಬ್ದುನಿಯಾವನ್ನು ಓದಿ