ಅಮೆರಿಕದ ಇಂಡಿಯಾನ ಯೂನಿವರ್ಸಿಟಿಯಲ್ಲಿ ಮಿ.ಇಂಡಿಯ ಹಿಂದಿ ಸಿನಿಮಾ ಪ್ರದರ್ಶನ

ಶುಕ್ರವಾರ, 17 ಅಕ್ಟೋಬರ್ 2014 (12:11 IST)
ಮಿಸ್ಟರ್ ಇಂಡಿಯ 1987ರಲ್ಲಿ ಬಿಡುಗಡೆಯಾದ ಚಿತ್ರ. ಫ್ಯಾಂಟಸಿಗಳನ್ನು ಒಳಗೊಂಡಿದ್ದ ಆ ಚಿತ್ರ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಅಷ್ಟೇ ಅಲ್ಲದೆ ಆ ಚಿತ್ರವು ಕೇವಲ ಹಿಂದಿ ಭಾಷೆಯಲ್ಲಿ ಮಾತ್ರವಲ್ಲದೆ ಭಾರತೀಯ ಬಹುತೇಕ  ಎಲ್ಲಾ ಭಾಷೆಗಳಲ್ಲೂ ಸಹಿತ ಬಿಡುಗಡೆ ಆಗಿತ್ತು. ಎಲ್ಲ ಭಾಷೆಯಲ್ಲೂ ಸಹಿತ ಅಷ್ಟೇ ಜನಪ್ರಿಯತೆ ಪಡೆದಿತ್ತು. 
 
ಈ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ಶ್ರೀದೇವಿ ನಟಿಸಿದ್ದರು. ಅದೃಶ್ಯವಾಗಿ ಜನಸಹಾಯ ಮಾಡುವ ವ್ಯಕ್ತಿ ಒಬ್ಬನ ಕಥೆ ಇದಾಗಿತ್ತು. ಖಳನಟ ಅಮರೀಶ್ ಪುರಿ ಅವರ ಮೊಗ್ಯಾಮ್ಬೋ ಖುಷ್ ಹುವಾ ಎನ್ನುವ ಡೈಲಾಗ್ ಈ ಕ್ಷಣವು ಜನಪ್ರಿಯ. ಇದನ್ನುಇತ್ತೀಚಿಗೆ ಅಮೆರಿಕದಲ್ಲಿರುವ ಇಂಡಿಯಾನ ಯೂನಿವರ್ಸಿಟಿಯಲ್ಲಿ ಪ್ರದರ್ಶನ ಮಾಡಲಾಯಿತು. 
 
ಅದಕ್ಕೆಂದು ಖುದ್ದು ಅನಿಲ್ ಕಪೂರ್ ಹೋಗಿ ಆ ಕಾರ್ಯಕ್ರಮದಲ್ಲಿ ಭಾಗಿಯಾದರು. ತನ್ನ ಸಿನಿಮಾ ಅಲ್ಲಿ ಪ್ರದರ್ಶನ ಆಗಿದ್ದಕ್ಕೆ ತುಂಬಾ ಥ್ರಿಲ್ ಆಗಿದ್ದಾರೆ ಅನಿಲ್ ಕಪೂರ್. ಮಿಸ್ಟರ್ ಇಂಡಿಯಾ ಚಿತ್ರವನ್ನು ಇಂಡಿಯಾನ ಯೂನಿವರ್ಸಿಟಿ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಪ್ರದರ್ಶನ ಮಾಡಲಾಯಿತು. ಚಿತ್ರ ವೀಕ್ಷಿಸಿದ ಬಳಿಕ ಆ ಬಗ್ಗೆ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಯಿತು. ಅದರಲ್ಲಿ ಅನಿಲ್ ಕಪೂರ್ ಸಹಿತ ಭಾಗವಹಿಸಿದ್ದರಂತೆ. ಅಷ್ಟು ಹಳೆ ಚಿತ್ರಕ್ಕೆ ಬೆಲೆ ಸಿಕ್ಕಿದ್ದು ಭಾರತೀಯರಿಗೂ ಖುಷಿ ಕೊಟ್ಟಿದೆ. 
 

ವೆಬ್ದುನಿಯಾವನ್ನು ಓದಿ