ಪತ್ನಿ ಜತೆಗೆ ದೀಪಾವಳಿ ಆಚರಿಸಿದ ಧೋನಿ

ಸೋಮವಾರ, 31 ಅಕ್ಟೋಬರ್ 2016 (14:30 IST)
ರಾಂಚಿ:  ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಗೆದ್ದು ನಾಯಕ ಎಂ ಎಸ್ ಧೋನಿ ನಿರಾಳವಾಗಿದ್ದಾರೆ. ಹೀಗಾಗಿ ಅವರು ಈ ಬಾರಿ ದೀಪಾವಳಿ ಹಬ್ಬ ಆಚರಿಸುವುದಕ್ಕೆ ಕಾರಣವೂ ಇದೆ.

ಪತ್ನಿ ಸಾಕ್ಷಿ ಸಿಂಗ್ ಮತ್ತು ಪುತ್ರಿ ಜೀವಾ ಜತೆ ಹಣತೆ ಹಚ್ಚುತ್ತಿರುವ, ದೀಪಾವಳಿ ಹಬ್ಬ ಆಚರಿಸುತ್ತಿರುವ ಮಹಿ ಮತ್ತು ಫ್ಯಾಮಿಲಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸ್ವತಃ ಧೋನಿ ಪತ್ನಿ ಸಾಕ್ಷಿ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.

ಇದರಲ್ಲಿ ಧೋನಿ ಪುತ್ರಿಯನ್ನು ಎತ್ತಿಕೊಂಡು ಹಣತೆ ಹಚ್ಚುತ್ತಿರುವ ಫೋಟೋ ಕೂಡಾ ಇದೆ. ಅಂತೂ ಸರಣಿ ಗೆಲುವು ಮತ್ತು ದೀಪಾವಳಿ ಹಬ್ಬ ಎರಡೂ ಸೇರಿ ಧೋನಿಗೆ ಈ ಸಾರಿ ಡಬಲ್ ಖುಷಿ. ಸದ್ಯಕ್ಕಂತೂ ಯಾವುದೇ ಏಕದಿನ ಸರಣಿಗಳಿಲ್ಲದೇ ಇರುವ ಕಾರಣ ಧೋನಿ ನಿರಾಳವಾಗಿ ಕುಟುಂಬದ ಜತೆ ಕಾಲ ಕಳೆಯುತ್ತಿರುವ ಫೋಟೋಗಳಿಗೆ ಭರ್ಜರಿ ಲೈಕ್ ಬಂದಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ