ಡಿಕೆ ಚಿತ್ರದ ಹಾಡುಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ಶುಕ್ರವಾರ, 26 ಡಿಸೆಂಬರ್ 2014 (09:33 IST)
ಪ್ರೇಂ ನಿರ್ದೇಶನದ, ನಟನೆಯ ಚಿತ್ರಗಳಲ್ಲಿ ಮಾತ್ರ ಹೀಗೆ ಆಗೋದು ಅಂತ ಕಾಣುತ್ತದೆ  . ಪ್ರೇಂ ಅದೇ ಜೋಗಿ ಪ್ರೇಂ ಅವರ ಬಗ್ಗೆ ನಾವು ಹೇಳೋಕೆ ಹೊರಟಿರುವುದು.  ಪ್ರೇಮ್ ಹಾಗೂ ಚೈತ್ರ ಅಭಿನಯದ ಡಿ ಕೆ ಧ್ವನಿ ಸುರುಳಿಗೆ ಸಿಕ್ಕಾಪಟ್ಟೆ ಬೇಡಿಕೆ ಬಂದು ಅದು ಈಗ ಎಲ್ಲರನ್ನು ಮತ್ತೆ ಮತ್ತೆ ಆಕರ್ಷಿಸಿ, ಈಗ ಆ ಚಿತ್ರದ ಹಾಡುಗಳ ಧ್ವನಿ ಸುರಳಿಯ ಸೀಡಿಗಳು ಮತ್ತೆ ಮತ್ತೆ ಬೇಡಿಕೆ ದೊರಕಿಸಿ ಕೊಂಡಿದೆ.
ಹಾಗಂತ ಚಿತ್ರತಂಡ ಹೇಳಿದೆ. ಈ ಸಂಗತಿ  ತಂಡದಲ್ಲಿ ಖುಷಿ ಅಲೆ ಎಬ್ಬಿಸಿದೆ. ಅರ್ಜುನ್ ಜನ್ಯ ಅವರು ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ತುಮಕೂರು ಜಿಲ್ಲೆಯ ಸುದರ್ಶನ್ ಅವರು ಅವರು ಮೂರು ಹಾಡುಗಳನ್ನು ರಚಿಸಿದ್ದಾರೆ.ಪ್ರೇಮ್ ಡ್ರೀಮ್ಸ್ ರಕ್ಷಿತಾ ಪ್ರೇಮ್ ಹಾಗೂ ಗ್ಲೆನ್ ಡೈಸ್ ಅವರ ಡಿ ಕೆ ಪರಿಚಯದ ಹಾಡಿನಲ್ಲಿ ಮಾಸ್ಟರ್ ಸೂರ್ಯ ಪ್ರೇಮ್ ಸಹ ಪ್ರಥಮ ಬಾರಿಗೆ ಹೆಜ್ಜೆ ಹಾಕಿದ್ದಾನೆ. 
 
ವಿಜಯ್ ಹಂಪಲಿ  ಚಿತ್ರಕ್ಕೆ ಕಥೆ, ಚಿತ್ರಕಥೆ  ಹಾಗೂ ಸಂಭಾಷಣೆ ಒದಗಿಸಿದ್ದಾರೆ. ಆಬ್ ಕಿ ಬಾರ್ ಮೇರೆ ಸರ್ಕಾರ್ ಎನ್ನುವ ಉಪ ಶೀರ್ಷಿಕೆ   ಹೊಂದಿರುವ  ಡಿ ಕೆ ಚಿತ್ರವನ್ನು ಜೆ ಜೆ ಸಿನೆ ಪ್ರೊಡಕ್ಷನ್ ಅಲ್ಲಿ ಗ್ಲೆನ್ ಡಿಯಸ್ ಅವರು ನಿರ್ಮಾಣ ಮಾಡಿದ್ದಾರೆ. ಆನಂದ್, ಮಾಸ್ ಮಾದ , ಶ್ರೀನಿವಾಸ್ ಪಿ ಬಾಬು, ನಾಗೇಶ್, ಪ್ರಭು, ಬದ್ರಿ, ಡ್ಯಾನಿ, ಬಾಬು, ಸೋಮು, ಮಂಜು, ರವಿ ತಾಂತ್ರಿಕ ವರ್ಗದ ಸದಸ್ಯರು.ಪ್ರೇಮ್  ಮತ್ತು ಚೈತ್ರ  ಅಲ್ಲದೆ  ಶೋಭರಾಜ್, ಶರತ್ ಲೋಹಿತಾಶ್ವ, ರಿಶಿಕುಮಾರ ಸ್ವಾಮೀಜಿ  ಮುಂತಾದವರು ನಟಿದ್ದಾರೆ. 

ವೆಬ್ದುನಿಯಾವನ್ನು ಓದಿ