ಬಾಲಿವುಡ್‌ಗೆ ಹಾರಿದ ಸ್ಯಾಂಡಲ್‌ವುಡ್ ನಿರ್ದೇಶಕ

ಬುಧವಾರ, 4 ಜನವರಿ 2017 (11:03 IST)
ಇತ್ತೀಚೆಗೆ ಸ್ಯಾಂಡಲ್‌ವುಡ್‍ನಲ್ಲಿ ತೆರೆಕಂಡು ಬೆಚ್ಚಿ ಬೀಳಿಸಿದ ಸಿನಿಮಾ ’ಮಮ್ಮಿ’. ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಯಲ್ಲಿದ್ದ ಸಿನಿಮಾ. ಈ ಚಿತ್ರದ ನಿರ್ದೇಶಕ ಲೋಹಿತ್ ಎಚ್ ಈಗ ಟಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳ ಮೇಲೆ ಕಣ್ಣಾಕಿದ್ದಾರೆ.
 
ಈಗಾಗಲೆ ಮಮ್ಮಿ ಚಿತ್ರ ತೆಲುಗು ಭಾಷೆಗೆ ಡಬ್ ಆಗಿದೆ. ಈ ಹಾರರ್ ಥ್ರಿಲ್ಲರ್ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರೆಯ ವ್ಯಕ್ತವಾಗಿದೆ. ಇದೀಗ ಈ ಚಿತ್ರ ಹಿಂದಿ ರೈಟ್ಸ್ ರೂ.30 ಲಕ್ಷಕ್ಕೆ ಮಾರಾಟವಾಗಿದೆ. ಚಿತ್ರದಲ್ಲಿ ದೊಡ್ಡ ಸ್ಟಾರ್‌ಗಳಿಲ್ಲದಿದ್ದರೂ ಸಿನಿಮಾ ಮಾತ್ರ ಉತ್ತಮ ಬೆಲೆಗೆ ಮಾರಾಟವಾಗುತ್ತಿದೆ ಎನ್ನುತ್ತಿದೆ ಗಾಂಧಿನಗರ.
 
ಹಿಂದಿ ಡಬ್ಬಿಂಗ್ ರೈಟ್ಸ್ ಸೇಲಾಗಿದ್ದರೂ ಚಿತ್ರವನ್ನು ರೀಮೇಕ್ ಮಾಡಲಾಗುತ್ತದಂತೆ. ಲೋಹಿತ್ ಅವರೇ ಅಲ್ಲೂ ಆಕ್ಷನ್ ಕಟ್ ಹೇಳಲಿದ್ದಾರೆ. ಮಮ್ಮಿ ಚಿತ್ರ 2016ರಲ್ಲಿ ತೆರೆಕಂಡ ಹಿಟ್ ಚಿತ್ರಗಳ ಸಾಲಿನಲ್ಲಿ ಸ್ಥಾನಪಡೆದಿದೆ. ಈಗಲೂ ಪ್ರೇಕ್ಷಕರನ್ನು ಸೆಳೆಯುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ