ಮುರಾರಿಯ ಬೈಕ್ ಹರಾಜಿಗಿದೆಯಂತೆ!

ಬುಧವಾರ, 2 ನವೆಂಬರ್ 2016 (10:34 IST)
ಬೆಂಗಳೂರು: ಮುಕುಂದ ಮುರಾರಿ ಚಿತ್ರದಲ್ಲಿ ಮುರಾರಿ ಪಾತ್ರಧಾರಿ ಸುದೀಪ್ ಉಪೇಂದ್ರರನ್ನು ಕೂರಿಸಿಕೊಂಡು ಹೋಗುವ ಬೈಕ್ ನೀವು ನೋಡಿರಬಹುದು. ಅದನ್ನೀಗ ಹರಾಜು ಹಾಕುತ್ತಾರಂತೆ.

ಈ ಸಿನಿಮಾಕ್ಕಾಗಿಯೇ ಮುಂಬೈನಲ್ಲಿ ಈ ಬೈಕ್ ವಿನ್ಯಾಸಗೊಳಿಸಲಾಗಿತ್ತು. ಅದನ್ನೀಗ ನವಂಬರ್ 11 ರಂದು ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಕೊಳ್ಳುವವರಿಗೆ ಕೊಳ್ಳಬಹುದು ಎಂದು ಚಿತ್ರದ ವಿತರಕ ಮಂಜು ಹೇಳಿದ್ದಾರೆ.  ಒಂದು ಒಳ್ಳೆಯ ಉದ್ದೇಶಕ್ಕಾಗಿ ಹರಾಜು ಮಾಡಲಾಗುತ್ತಿದೆಯಂತೆ.

ಈ ಬೈಕ್ ನ್ನು ನಿನ್ನೆ ಬೆಂಗಳೂರಿನ ಮನೇಕಾ ಥಿಯೇಟರ್ ಎದುರುಗಡೆ ಪ್ರದರ್ಶನಕ್ಕೆ ಇಡಲಾಗಿದೆ.  ಮುಂದೆ ಇದನ್ನು ಮೈಸೂರು, ತುಮಕೂರು, ದಾವಣೆಗೆರೆ ಮುಂತಾದೆಡೆ ಪ್ರದರ್ಶನಕ್ಕಿಡಲಾಗುವುದು. ಮತ್ತೆ ಮನೇಕಾ ಥಿಯೇಟರ್ ಮುಂದೆ ನವಂಬರ್ 9 ರಂದು ಪ್ರದರ್ಶನಕ್ಕಿಟ್ಟು 11 ರಂದು ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ವಿತರಕರು ಹೇಳಿದ್ದಾರೆ.

ಈಗಾಗಲೇ ಸುದೀಪ್ ಮತ್ತು ಉಪೇಂದ್ರ ಅಭಿಮಾನಿಗಳು ಕೊಳ್ಳಲು ಮುಂದೆ ಬರುತ್ತಿದ್ದು, 2 ಲಕ್ಷ ರೂ.ವರೆಗೆ ಬೆಲೆ ಬಂದಿದೆ. ಆದರೂ ನವಂಬರ್ 11 ರವರೆಗೆ ಕಾಯುವುದಾಗಿ ಮಂಜು ಹೇಳಿದ್ದಾರೆ. ಬೈಕ್ ಮಾರಿ ಬಂದ ಹಣವನ್ನು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳಿಗೆ ದೇಣಿಗೆ ನೀಡುವ ಯೋಜನೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ