ಮೈ ಚಾಯ್ಸ್ ಸಾಕ್ಷ್ಯಚಿತ್ರ ನನ್ನ ಆಯ್ಕೆ: ದೀಪಿಕಾ ಪಡುಕೋಣೆ

ಬುಧವಾರ, 6 ಮೇ 2015 (10:26 IST)
ಮಹಿಳೆಯರನ್ನು ಹೀನವಾಗಿ ಕಾಣುವ ಪುರುಷರು ಇನ್ನೂ ಇದ್ದಾರೆ. ಸಂಕುಚಿತ ಸ್ವಭಾವ ಹೊಂದಿರುವವರ ಬಗ್ಗೆ ಚರ್ಚೆಯಾಗಬೇಕಿದೆ. ಮೈ ಚಾಯ್ಸ್ ಇರುವುದೇ ಅಂತಹವರಿಗಾಗಿ. ಸ್ತ್ರೀ-ಪುರುಷ ಸಮಾನತೆ ಎನ್ನುವ ಅಂಶದ ಅಡಿಯಲ್ಲಿ ಚರ್ಚೆ ನಡೆಯಬೇಕು ಎಂದಿರುವ ದೀಪಿಕಾ, ಪ್ರೀತಿಸುವುದು ನನ್ನ ಆಯ್ಕೆಯಾಗಿದ್ದು, ಬ್ರೇಕ್ ಅಪ್ ಆದರೂ ಕೂಡ ಅದು ನನ್ನದೇ ಆಯ್ಕೆ. ಇವುಗಳಲ್ಲದೆ ಎಂತಹ ಉಡುಪು ಧರಿಸಬೇಕು, ನನ್ನ ಬದುಕು ಹೇಗಿರಬೇಕು ಎಂಬುದನ್ನು ನಿರ್ಧರಿಸುವುದೂ ನಾನೇ. ಆದ್ದರಿಂದ ಮೈ ಚಾನ್ಸ್ ಗೆ ಪ್ರಧಾನ ಆದ್ಯತೆ ನೀಡಿದ್ದೇನೆ ಎಂದಿದ್ದಾಳೆ. 
ಈ ಹಿಂದೆ ಈಕೆ ನಟಿಸಿದ್ದ ಮೈ ಚಾಯ್ಸ್ ಸಾಕ್ಷ್ಯಚಿತ್ರ ಹೆಚ್ಚು ಸುದ್ದಿಗೆ ಗ್ರಾಸವಾಗಿತ್ತು ಎಂಬ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಈ ಹಿನ್ನೆಲೆಯಲ್ಲಿಯೇ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ಹಾಗೂ ವಿಮರ್ಶೆಯೂ ದೊರಕಿತು. ಆ ವಿಡಿಯೋ ವಿರುದ್ಧವಾಗಿ ಮೈ ಚಾಯ್ಸ್ ಎಂಬ ಪುರುಷ ಪ್ರಧಾನ ಸಾಕ್ಷ್ಯಚಿತ್ರವೂ ದೀಪಿಕಾ ಕೈ ಸೇರಿತ್ತು. 
 
ಇವೆಲ್ಲವುಗಳ ಬಗ್ಗೆ ಇಲ್ಲಿಯವರೆಗೂ ಮೌನ ವಹಿಸಿದ್ದ ದೀಪಿಕಾ ಪ್ರಸ್ತುತ ಪ್ರತಿಕ್ರಿಯಿಸಿದ್ದು, ನನ್ನ ಈ ಪುಟ್ಟ ಪ್ರಯತ್ನವನ್ನು ಅಭಿನಂದಿಸಿದವರಿಗೆ ಧನ್ಯವಾದ. ಅದೇ ರೀತಿ ವಿಮರ್ಶಿಸಿದವರ ಅಭಿಪ್ರಾಯಗಳನ್ನೂ  ಗೌರವಿಸುತ್ತೇನೆ. ಆದರೆ ಈ ಚಿತ್ರದ ಮೂಲಕ ನೀಡಿದ ಸಂದೇಶ ಅಸ್ಪಷ್ಟವಾಗಿ ತಲುಪಿದೆ ಎಂದು ನನಗರಿವಾಗುತ್ತಿದೆ. ಕಾರಣ ಸಾಕಷ್ಟು ಮಂದಿಗೆ ನನ್ನ ಉದ್ದೇಶ ಅರ್ಥವಾಗಿಲ್ಲ. ಅಲ್ಲದೆ ಚಿತ್ರದಲ್ಲಿ ಹೀಗೆಯೇ ಮಾಡಿ ಎಂದು ಯಾರಿಗೂ ಸೂಚಿಸಿಲ್ಲ. ಪರಿಸ್ಥಿತಿಗೆ ಪೂರಕವಾಗಿ ಅಭಿಪ್ರಾಯಗಳನ್ನು ತೆಗೆದುಕೊಳ್ಳಿ ಎಂದಷ್ಟೇ ಹೇಳಿಲಾಗಿದೆ. ಅದುವೇ ನನ್ನ ಉದ್ದೇಶ ಕೂಡ ಎಂದಿದ್ದಾಳೆ. 

ವೆಬ್ದುನಿಯಾವನ್ನು ಓದಿ