ನನ್ನ ತಂದೆಯೇ ನನಗೆ ಸೂಪರ್ ಹೀರೋ: ಶ್ರದ್ಧಾ ಕಪೂರ್

ಶನಿವಾರ, 5 ಸೆಪ್ಟಂಬರ್ 2015 (10:40 IST)
ಇವತ್ತು ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿರುವ ಹೆಚ್ಚಿನ ಬಾಲಿವುಡ್ ನಟಿಯರನ್ನು ನೋಡಿದ್ರೆ ಅವರಲ್ಲಿ ಕೆಲವರು ತಮ್ಮ ತಂದೆಯ ಮೂಲಕವೇ ಬಾಲಿವುಡ್ ಅಂಗಳಕ್ಕೆ ಬಂದವರು. ನಟಿ ಸೋನಾಕ್ಷಿ ಸಿನ್ಹಾ ತಂದೆ ಶತ್ರುಘ್ನ ಸಿನ್ಹಾ ಕೂಡ ನಟರು. ಸೋನಂ ಕಪೂರ್ ತಂದೆ ಅನಿಲ್ ಕಪೂರ್ ಕೂಡ ಒಂದು ಕಾಲದ ಸೂಪರ್ ಹೀರೋ, ಆಲಿಯಾ ಭಟ್ ನಿರ್ಮಾಪಕ ನಿರ್ದೇಶಕ ಮಹೇಶ ಭಟ್ ಮಗಳು. ಶ್ರದ್ಧಾ ಕಪೂರ್ ಶಕ್ತಿ ಕಪೂರ್ ಮುದ್ದಿನ ಮಗಳು. ಹೀಗೆ ನೋಡ್ತಾ ಹೋದ್ರೆ ಅನೇಕ ಉಹಾದರಣೆಗಳು ಸಿಗುತ್ತದೆ. 
ಅದರಲ್ಲೂ ಶ್ರದ್ಧಾ ಕಪೂರ್ ಅವರಿಗೆ ತಂದೆಯೆಂದರೆ ಪಂಚ ಪ್ರಾಣ. ಶಕ್ತಿ ಕಪೂರ್ ಮೊನ್ನೆ ಮೊನ್ನೆಯಷ್ಟೇ ತಮ್ಮ 57ನೇ  ಹುಟ್ಟುಹಬ್ಬವನ್ನು ಆಚರಿಸಿಕೊಂಡ್ರು. ತಂದೆಯ ಬರ್ತಡೇ ಗೆ ಶ್ರದ್ಧಾ ಕೂಡ ಢಿಪರೆಂಟ್ ಆಗಿ ವಿಶ್ ಮಾಡಿದ್ರು. ತನ್ನ ಹಾಗೂ ತಂದೆ ಸೆಲ್ಫಿಯೊಂದ0ನ್ನು ಟ್ವಿಟರ್ ನಲ್ಲಿ ಶೇರ್ ಮಾಡೋ ಮೂಲಕ ಹ್ಯಾಪಿ ಬರ್ತಡೇ ಅಪ್ಪ. ನೀನೇ ನನಗೆ ಸೂಪರ್ ಹೀರೋ   ಎಂದಿದ್ದಾರೆ.
 
ಶಕ್ತಿ ಕಪೂರ್ ಒಂದು ಕಾಲದಲ್ಲಿ ಇಡೀ ಬಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡಿದ ನಟ. ಹಿಮ್ಮತ್ ವಾಲಾ ಸಿನಿಮಾದಲ್ಲಿ ಶಕ್ತಿ ವಿಲನ್ ಆಗಿ ಮಿಂಚಿದ್ರು. ಅಲ್ಲದೇ ಅಂದಾಜ್ ಅಪ್ನ ಅಪ್ನ ಸಿನಿಮಾದಲ್ಲಿ ಹಾಸ್ಯ ಪಾತ್ರವನ್ನು ನಿಭಾಯಿಸಿದ್ದರು. 

ವೆಬ್ದುನಿಯಾವನ್ನು ಓದಿ