ಫೋಟೋಗ್ರಾಫರ್ ಆಗಿದ್ದರೆ ಚಂದ.. ಆತನಿಗೆ ನಾನು ಮೊದಲ ಹೆಂಡತಿ ಆಗಿದ್ದರೆ ಚಂದ !!

ಬುಧವಾರ, 1 ಅಕ್ಟೋಬರ್ 2014 (12:03 IST)
ಪ್ರಿಯಾಮಣಿ ದಕ್ಷಿಣ ಭಾರತದ ಲೀಡ್ ನಾಯಕಿಯರಲ್ಲಿ ಇದ್ದಂತಹ ನಟಿ. ಆದರೆ ಮಹಿಳಾ ಪ್ರಧಾನ ಚಿತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದ ಕಾರಣ ಆಕೆಗೆ ಗೆಲುವು ಕೈ ಹಿಡಿಯಲಿಲ್ಲ. ತನ್ನ ಅದೃಷ್ಟವನ್ನು ಹಿಂದಿಯ ಚೆನ್ನೈ ಎಕ್ಸ್‌ಪ್ರೆಸ್‌ ನಲ್ಲಿ ಸಹಿತ ಪರೀಕ್ಷೆ ಮಾಡಿದರು ಸಹಿತ ಆಕೆಯ ಕನಸು ನನಸಾಗಲೇ ಇಲ್ಲ. 
 
ಇದರ ಮಧ್ಯೆ ಕನ್ನಡ ಚಿತ್ರರಂಗದಲ್ಲಿ ತನ್ನ ಅದೃಷ್ಟವನ್ನು ಅಂಬರೀಶ ಚಿತ್ರದ ಮೂಲಕ ಪರೀಕ್ಷೆ ಮಾಡಿಕೊಳ್ಳಲು ಕಾಯುತ್ತಿರುವ ಈ ಭಾಮೆಯ ಬಗ್ಗೆ ಈಗ ಕಾಲಿವುಡ್ ಮತ್ತು ಟಾಲಿವುಡ್ ಮಾಧ್ಯಮಲೋಕ ಒಂದು ಸಂಗತಿ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತಿದೆ. ಅದು ಬೇರೆ ಯಾವ ಸಂಗತಿಯು ಸಹಿತ ಅಲ್ಲ, ಆಕೆಯ ಮದುವೆಗೆ  ಸಂಬಂಧಪಟ್ಟಿದುದು. ಪ್ರಿಯ ಸಧ್ಯದಲ್ಲೇ ಮದುವೆ ಆಗ ಬಹುದು ಎನ್ನುವ ಸುದ್ದಿಯನ್ನು ನಾವು ಈ ಮೊದಲು ತಿಳಿಸಿದ್ದೆವು.
 
 ಆದರೆ ಆ ಬಗ್ಗೆ ಸ್ಪಷ್ಟತೆ ಇಲ್ಲ, ಆದರೂ ಸಹಿತ ಆಕೆಯ ಬಗ್ಗೆ ಹರಡಿರುವ ಸುದ್ದಿ ಹಿಂಗೆಲ್ಲ ಇದೆ. ಪ್ರಿಯಾಮಣಿ ಕೆಲವು ದಿನಗಳ ಹಿಂದೆ  ಬ್ಯುಸಿನೆಸ್ ಮ್ಯಾನ್ ಜೊತೆ ಹೆಚ್ಚು ಕಾಲಕ್ಷೇಪ ಮಾಡುತ್ತಿದ್ದಾಳೆ ಎಂದು ಬರೆದಿದ್ದವರು ಈಗ ಆಕೆ ಮದುವೆ ಆಗುವ ಹುಡುಗ ಬೇರೇನೆ ಅಂತೆ ಎಂದು ಹೇಳಿದ್ದಾರೆ. ಕಾಲಿವುಡ್ ಗೆ ಸೇರಿದ ಛಾಯಾಗ್ರಾಹಕ ಈಕೆಯ ಮನ ಗೆದ್ದಿರಬಹುದು ಎನ್ನುವ ಗುಸುಗುಸು ಇದೆ. 
 
ಆ ಬಗ್ಗೆ ಇಂಡೈರೆಕ್ಟಾಗಿ ಮಾಧ್ಯಮದವರಿಗೆ ಹೇಳಿದ್ದಾಳೆ. ತನ್ನ ಪತಿ  ಛಾಯಾಗ್ರಾಹಕ ಆಗಿದ್ದರೆ ಚನ್ನ, ಆತನಿಗೆ ನಾನು ಮೊದಲ ಪತ್ನಿ ಆದರೆ ಇನ್ನು ಚಂದ ಎಂದು. ಹಾಗಾದರೆ ಆ ಆತ ಯಾರು ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.. ಈ ಬ್ಲಾಕ್ ಥಂಡರ್ ಮನಗೆದ್ದ ಹುಡುಗನ ಸುದ್ದಿ ತಿಳಿದ ತಕ್ಷಣ ನಾವು ನಿಮಗೆ ಹೇಳುತ್ತೇವೆ. 
 

ವೆಬ್ದುನಿಯಾವನ್ನು ಓದಿ