ಮತ್ತೆ ಪರದೆ ಸಿಂಗರಿಸಲು ಬಂದ ನಾಗತಿಹಳ್ಳಿ ಚಂದ್ರಶೇಖರ್

ಬುಧವಾರ, 1 ಜುಲೈ 2015 (10:09 IST)
ಕನ್ನಡ ಚಿತ್ರರಂಗದ ವಿಭಿನ್ನ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್. ಅವರ ನಿರ್ದೇಶನದ ಚಿತ್ರಗಳು ಅವರ ಬರಹಗಳಷ್ಟೇ ಭಿನ್ನ ಹಾಗೂ ವಿಶಿಷ್ಟ. ಅನೇಕಾನೇಕ ಉತ್ತಮ ಕನ್ನಡ ಚಿತ್ರಗಳನ್ನು ನೀಡಿದ್ದ ನಾಗ್ತಿ ಮೇಷ್ಟ್ರು ಮತ್ತೆ ನಿರ್ದೇಶನದತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಬಾ ನಲ್ಲೆ ಮಧುಚಂದ್ರಕೆ, ನನ್ನ ಪ್ರೀತಿಯ ಹುಡುಗಿ, ಅಮೆರಿಕ ಅಮೆರಿಕ, ಅಮೃತಧಾರೆ ಹೀಗೆ ಹತ್ತುಹಲವಾರು ಚಿತ್ರಗಳ ನಿರ್ದೇಶನ ಮಾಡಿದ್ದಾರೆ. 
ಕನ್ನಡ ಚಿತ್ರರಂಗದಲ್ಲಿ ಹೊಸಭಾಷ್ಯ ಬರೆದಿದ್ದ ನಾಗ್ತಿ ಅವರ ನಿರ್ದೇಶನದ ಕೆಲವು ಚಿತ್ರಗಳು ಸೋತು ಹೈರಾಣಾಗಿದ್ದು ಸುಳ್ಳಲ್ಲ. ಆದಕಾರಣ ಅವರು ಸ್ವಲ್ಪ ವಿರಾಮ ತೆಗೆದುಕೊಂಡು ಈಗ ಮತ್ತೇ ಕನ್ನಡ ಪ್ರೇಕ್ಷಕರ ಮನರಂಜಿಸಲು ಸಿದ್ಧರಾಗುತ್ತಿದ್ದಾರೆ. ಈಗ ಅವರು ದೊಡ್ಡೇರಿ ವೆಂಕಟಗಿರಿ ಕಥೆ ಇಷ್ಟಕಾಮ್ಯ ವನ್ನು ಚಿತ್ರರೂಪಕ್ಕೆ ತರಲು ಸಿದ್ಧರಾಗಿದ್ದಾರೆ. ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳಲ್ಲಿ  ನಟಿಸಲು ನಾಗ್ತಿ ಅವರು ಟೀವಿ ಕಲಾವಿದರಾದ ವಿಜಯ್ ಸೂರ್ಯ,ಮಯೂರಿ ಮತ್ತು ಕಾವ್ಯ ಶೆಟ್ಟಿಯನ್ನು ಆಯ್ಕೆ ಮಾಡಿದ್ದಾರೆ. 50 ದಿನಗಳ ಕಾಲ ಚಿತ್ರೀಕರಣ ನಡೆಯುವ ಈ ಚಿತ್ರ ಚಿಕ್ಕಮಗಳೂರ್ ಅದರ ಸುತ್ತಮುತ್ತಲು ನಡೆಯಲಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಇರುವ ಈ ಚಿತ್ರಕ್ಕೆ ರವಿಕುಮಾರ್  ಸನ ಛಾಯಾಗ್ರಹಣ, ಶಂಕರ್ ಗೌಡ ನಿರ್ಮಾಣವಿದೆ. 

ವೆಬ್ದುನಿಯಾವನ್ನು ಓದಿ