ಹಾಯ್ ಹೇಳಲು ನಮಸ್ತೇ ಮೇಡಂ ಥಿಯೇಟರ್ ಗೆ ಬರ್ತಾ ಇದ್ದಾಳಪ್ಪೋ

ಶುಕ್ರವಾರ, 24 ಅಕ್ಟೋಬರ್ 2014 (12:52 IST)
ಕನ್ನಡದ ಮುದ್ದು ಮುದ್ದಾದ ನಟಿ ರಾಗಿಣಿ ದ್ವಿವೇದಿ ನಟಿಸಿರುವ ಬಹು ನಿರೀಕ್ಷೆಯ ಚಿತ್ರ ನಮಸ್ತೇ ಮೇಡಂ ಇಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. 
 
ದೀಪಾವಳಿ ಹಬ್ಬದ ಕಾಣಿಕೆಯಾಗಿ ಈ ಚಿತ್ರ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಮುಖ್ಯ ಪಾತ್ರಧಾರಿ ಆಗಿದ್ದಾರೆ. ಇದರಲ್ಲಿ ಈ ಜೋಡಿ ಹಾಟ್ ಹಾಟ್ ಆಗಿ ನಟಿಸಿದ್ದಾರೆ ಎನ್ನುವ ಸುದ್ದಿ ಇದ್ದು, ಅದು ಸಧ್ಯದಲ್ಲೇ ತಿಳಿಯುತ್ತದೆ. 
 
ಈ ಚಿತ್ರದಲ್ಲಿ ರಾಗಿಣಿ ಚಿಲ್ಲಿಂಗ್ ಡ್ರೆಸ್‌ಗಳನ್ನು ಧರಿಸಿದ್ದು, ಎಲ್ಲರನ್ನು ರೋಮಾಂಚನ ಗೊಳಿಸುತ್ತಿದ್ದಾಳೆ ಎನ್ನುವ ಸುದ್ದಿ ಹೆಚ್ಚು ಬೆಲೆ ಕಂಡಿದೆ. ನಿಖಿಶ್ ಪಟೇಲ್ ಈ ಚಿತ್ರದ ಮತ್ತೊಬ್ಬ ಮುಖ್ಯ ಪಾತ್ರಧಾರಿಣಿ. ಇದರಲ್ಲಿ ನಿಖಿಶ ಕಿಟ್ಟಿ ಹೆಂಡ್ತಿ ಆಗಿದ್ದಾಳೆ. ಇದು ತೆಲುಗು ಚಿತ್ರದ ರೀಮೇಕ್ ಆಗಿದೆ. ಈ ಚಿತ್ರವನ್ನು ಪ್ರಸಿದ್ಧ ನಿರ್ದೇಶಕ ರವಿ ಆರ್ ಗರಣಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ರಘುರಾಜ್ ನಿರ್ದೇಶನ, ಸಂತೋಷ್ ರಾಯ್ ಪಾತಾಜೆ ಅವರ ಛಾಯಾಗ್ರಹಣ, ಶ್ರೀಧರ್ ಸಬ್ರಂ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
 

ವೆಬ್ದುನಿಯಾವನ್ನು ಓದಿ