ನಾನಾ ಪಾಟೇಕರ್ ಒಗ್ಗರಣೆ ಹಾಕ್ತಾ ಇದ್ದಾರಂತೆ....!

ಸೋಮವಾರ, 22 ಡಿಸೆಂಬರ್ 2014 (09:17 IST)
ನಾನಾ ಪಟೇಕರ್ ಭಾರತೀಯ ಚಿತ್ರರಂಗದ ವಿಶಿಷ್ಟ ಕಲಾವಿದ. ಅವರು ನಟಿಸಿರುವ ಚಿತ್ರಗಳು ಸದಾ ಜನರ ಮನದಲ್ಲಿ ಉಳಿಯುವಂತಹವುಗಳಾಗಿವೆ. ಅಲ್ಪ ಕಾಲದ ಬ್ರೇಕ್ ನಂತರ ನಾನಾ ಮತ್ತೆ ನಟಿಸಲು ಸಿದ್ಧತೆ ನಡೆಸಿದ್ದಾರೆ. ಅದು ಪ್ರಕಾಶ್ ರೈ ಅವರ ಪ್ರೀತಿಯ ಚಿತ್ರ ಒಗ್ಗರಣೆಯ ಹಿಂದಿ ವರ್ಶನ್‌ನಲ್ಲಿ. 
ಮರಾಠಿ ಮತ್ತು ಹಿಂದಿಯಲ್ಲಿ ಪ್ರಕಾಶ್ ರೈ ಒಗ್ಗರಣೆ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ನಾನಾ ಪಾಟೇಕರ್ ಎರಡರಲ್ಲೂ ಮುಖ್ಯ ಪಾತ್ರ ವಹಿಸುವ ಸಾಧ್ಯತೆಯಿದೆ. ನಾಸಿರುದ್ದೀನ್ ಷಾ ಅವರನ್ನು ಜನವರಿಯಲ್ಲಿ ಮೈಸೂರಿಗೆ ಕರೆ ತರುವ ಯೋಜನೆ ಹೊಂದಿದ್ದಾರೆ ಪ್ರಕಾಶ್ ಅಲ್ಲಿ ಇಬ್ಬರಿಗೂ ಕಥೆ ಹೇಳಿ ಸಿನಿಮಾದ ಬಗ್ಗೆ ಆಲೋಚನೆ ಮಾಡಿ ಬಳಿಕ ಕಾರ್ಯರೂಪಕ್ಕೆ ತರುವ ಯೋಜನೆ ಹೊಂದಿದ್ದಾರೆ.  ಕನ್ನಡದಲ್ಲಿ ಮತ್ತೂಂದು ಸಿನಿಮಾ ಮಾಡುವ ಸಿದ್ಧತೆಯನ್ನೂ ಅವರು ಮಾಡುತ್ತಿದ್ದಾರೆ. 
 
ಮಲೆಯಾಳಂ ಮೂಲದ ಚಿತ್ರವನ್ನು ಕನ್ನಡ ಮಾತ್ರವಲ್ಲ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರ್ದೇಶಿಸಿದ್ದ ಪ್ರಕಾಶ್ ರೈ ಈಗ ಬಾಲಿವುಡ್ ಅಸಮಾನ್ಯ ಪ್ರತಿಭೆಗಳನ್ನು ಒಗ್ಗೂಡಿಸಿ ತಮ್ಮ ಚಿತ್ರದಲ್ಲಿ ಅಭಿನಯಿಸುವಂತೆ ಮಾಡುತ್ತಿದ್ದಾರೆ. ಅವರ ಪ್ರಯತ್ನ ಸಫಲವಾಗಲಿ.

ವೆಬ್ದುನಿಯಾವನ್ನು ಓದಿ