ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯಿಸಲಿರುವ ದುಬಾರಿ ಸಿನಿಮಾ ನಿರ್ದೇಶನದಿಂದ ನಿರ್ದೇಶಕ ನಂದಕಿಶೋರ್ ಹೊರಬಂದಿದ್ದಾರೆ.
ಪೊಗರು ಸಿನಿಮಾವನ್ನು ನಿರ್ದೇಶಿಸಿದ್ದ ನಂದಕಿಶೋರ್ ಈ ಸಿನಿಮಾವನ್ನೂ ನಿರ್ದೇಶಿಸಲಿದ್ದಾರೆ ಎಂದು ನಿರ್ಧಾರವಾಗಿತ್ತು. ಆದರೆ ಪೊಗರು ಸಿನಿಮಾದ ವಿವಾದದ ಬಳಿಕ ನಿರ್ಮಾಪಕ ಕೆ ಉದಯ ಮೆಹ್ತಾ ನಂದಕಿಶೋರ್ ಬಗ್ಗೆ ಒಲವು ಹೊಂದಿಲ್ಲ ಎನ್ನಲಾಗಿದೆ.
ಅಲ್ಲದೆ, ದುಬಾರಿ ಸಿನಿಮಾಗೆ ಕತೆ ಬರೆದ ತಮಿಳು ಮೂಲದ ನಿರ್ದೇಶಕರೇ ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ನಂದಕಿಶೋರ್ ಗೆ ಗೇಟ್ ಪಾಸ್ ಕೊಡಲಾಗಿದೆ.