Photo Courtesy: Instagram
ಮೊನ್ನೆ ಉಪನೋಂದಣಿ ಕಚೇರಿಯಲ್ಲಿ ಕಾನೂನಾತ್ಮಕವಾಗಿ ದಂಪತಿಗಳಾದ ಜೋಡಿ ನಿನ್ನೆ ಆಪ್ತರ ಸಮ್ಮುಖದಲ್ಲಿ ರಿಂಗ್ ಬದಲಾಯಿಸಿಕೊಂಡಿದ್ದಾರೆ.
ಈ ವಿಚಾರವನ್ನು ಖುದ್ದು ಡ್ಯಾನಿಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಐಪಿಎಲ್ ಗೂ ಮೊದಲು ಡ್ಯಾನಿಶ್ ತಮ್ಮ ಭಾವೀ ಪತ್ನಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿದ್ದರು. ಸದ್ಯದಲ್ಲೇ ವಿವಾಹವಾಗುವುದಾಗಿ ತಿಳಿಸಿದ್ದರು. ಇದೀಗ ಲಾಕ್ ಡೌನ್ ನಿರ್ಬಂಧವಿರುವುದರಿಂದ ಕೇವಲ 15 ಜನ ಆಪ್ತರ ಸಮ್ಮುಖದಲ್ಲಿ ರಿಂಗ್ ಎಕ್ಸ್ ಚೇಂಜ್ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.