ನವಗ್ರಹ ರೀ ರಿಲೀಸ್‌: ದೊಡ್ಡ ಪರದೆ ಮೇಲೆ ದರ್ಶನ್ ಬರುತ್ತಿದ್ದ ಹಾಗೇ ಕುಣಿದು ಸಂಭ್ರಮಿಸಿದ ಅಭಿಮಾನಿಗಳು

Sampriya

ಶುಕ್ರವಾರ, 8 ನವೆಂಬರ್ 2024 (16:38 IST)
Photo Courtesy X
ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾ ನವಗ್ರಹ ಇಂದು ರೀ ರಿಲೀಸ್ ಆಗಿದ್ದು, 16 ವರ್ಷಗಳ ಬಳಿಕ ಮತ್ತೇ ದೊಡ್ಡ ಪರದೆ ಮೇಲೆ ಸಿನಿಮಾ ನೋಡಿ ಅಭಿಮಾನಿಗಳು ಸಂಭ್ರಮಾಚರಿಸಿದ್ದಾರೆ.

ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದರಿಂದ ಅಕ್ಟೋಬರ್ ತಿಂಗಳಿನಲ್ಲಿ ತೆರೆಗೆ ಬರಬೇಕಿದ್ದ ಡೆವಿಲ್ ಸಿನಿಮಾ ಇನ್ನೂ ಶೂಟಿಂಗ್ ಮುಗಿಸಿಲ್ಲ. ಇದರಿಂದ ದರ್ಶನ್ ಅಭಿಮಾನಿಗಳಿಗೆ ಬೇಸರವಾಗಿತ್ತು. ಇದೀಗ ದರ್ಶನ್ ಅಭಿನಯದ ನವಗ್ರಹ ಸಿನಿಮಾವನ್ನು ರೀ ರಿಲೀಸ್ ಮಾಡಿದ್ದರಿಂದ ಡಿ ಬಾಸ್ ಅಭಿಮಾನಿಗಳು ಖುಷಿಯಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲೂ ನವಗ್ರಹ ಸಿನಿಮಾ ರೀ ರಿಲೀಸ್ ಆಗುತ್ತಿದ್ದು. ಹೊಸ ಇತಿಹಾಸ ಸೃಷ್ಟಿಸುತ್ತದೆ ಎಂದು ಪೋಸ್ಟ್ ಮಾಡಿದ್ದರು. ಇಂದು ಸಿನಿಮಾ ರೀ ರಿಲೀಸ್ ಆಗಿದ್ದು ದರ್ಶನ್ ಹೊಸ ಸಿನಿಮಾದಂತೆ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಅಪಾರ ಸಂಖ್ಯೆಯಲ್ಲಿ ನವಗ್ರಹ ಸಿನಿಮಾವನ್ನು ನೋಡಲು ಅಭಿಮಾನಿಗಳು ಥಿಯೇಟರ್‌ಗೆ ಬಂದಿದ್ದಾರೆ.

ದರ್ಶನ್‌ರನ್ನು ದೊಡ್ಡ ಪರದೆ ಮೇಲೆ ನೋಡಿ ಕುಣಿದು ಸಂಭ್ರಮಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಡಿ ಬಾಸ್ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ