ಇದಕ್ಕೀಗ ಸ್ವತಃ ಸಂಜನಾ ಸ್ಪಷ್ಟನೆ ನೀಡಿದ್ದಾರೆ. ಎಲ್ಲಾ ಸ್ವಲ್ಪ ಓವರ್ ಆಯ್ತು. ನಾನು ರಿಯಾಲಿಟಿ ಶೋಗೆ ಹೋಗಲಿದ್ದೇನೆ ಎಂದೆಲ್ಲಾ ಸುದ್ದಿ ಬರುತ್ತಿದೆ. ಆದರೆ ಇದು ಯಾವುದೂ ನಿಜವಲ್ಲ. ನಾನು ಸೀರಿಯಲ್ ಬಿಟ್ಟಿದ್ದು ಯಾಕೆ ಎಂದು ಹೇಳಿಲ್ಲ ಎಂದು ಎಲ್ಲರೂ ತಮಗೆ ತೋಚಿದ ಕಾರಣ ಹೇಳಿಕೊಳ್ಳುತ್ತಿದ್ದಾರೆ. ಆದರೆ ಅದು ಯಾವುದೂ ನಿಜವಲ್ಲ. ನಾನು ಯಾಕೆ ಬಿಟ್ಟೆ ಎನ್ನುವುದು ನನ್ನ ಮನಸ್ಸಿಗೆ ಮಾತ್ರ ಗೊತ್ತು. ನಾನಾಗಿಯೇ ಹೊಸ ಪ್ರಾಜೆಕ್ಟ್ ಘೋಷಣೆ ಮಾಡುವವರೆಗೂ ಯಾವ ವದಂತಿಗಳನ್ನೂ ನಂಬಬೇಡಿ ಎಂದು ಸಂಜನಾ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.