ದೇವಸ್ಥಾನದಲ್ಲಿ ನಯನತಾರಾ, ಶಿಂಬು ಮದುವೆ!

ಶನಿವಾರ, 4 ಫೆಬ್ರವರಿ 2017 (11:35 IST)
ಡ್ಯಾನ್ಸ್ ಮಾಸ್ಟರ್ ಪ್ರಭುದೇವ ಜತೆಗಿನ ಪ್ರೇಮ ವ್ಯವಹಾರಕ್ಕೂ ಮುನ್ನ..ತಮಿಳು ಸ್ಟಾರ್ ಶಿಂಬು ಜತೆ ನಯನತಾರಾ ಕಣ್ಣಾಮುಚ್ಚಾಲೆ ಆಡಿರುವುದು ಗೊತ್ತೇ ಇದೆ. ಅದೇನಾಯಿತೋ ಏನೋ ಅವರ ಪ್ರೇಮಾಯಣ ಮದುವೆವರೆಗೂ ಹೋಗಲಿಲ್ಲ. ಪ್ರೇಮವ್ಯವಹಾರಕ್ಕೆ ಮಧ್ಯದಲ್ಲೇ ಕಾಮ ಬಿತ್ತು. 
 
ಆದರೆ ಇತ್ತೀಚೆಗೆ ಈ ಜೋಡಿ ಹಕ್ಕಿ ಮತ್ತೆ ಒಂದಾಗಿವೆ. ಅಷ್ಟೇ ಅಲ್ಲ ಮದುವೇನೂ ಆಗಿದ್ದಾರೆ. ಅದೂ ದೇವಸ್ಥಾನವೊಂದರಲ್ಲಿ ಎಂಬುದು ಗಮನರ್ಹ ಸಂಗತಿ! ಆದರೆ ಇದೆಲ್ಲಾ ನಡೆದಿರುವುದು ನಿಜವಾಗಿ ಅಲ್ಲವೇ ಅಲ್ಲ ಸಿನಿಮಾಗಾಗಿ ಮಾತ್ರ ಎಂಬುದನ್ನು ನೀವು ದಯವಿಟ್ಟು ಗಮನಿಸಬೇಕಾದ ಸಂಗತಿ. 
 
 ಈ ಚಿತ್ರದಲ್ಲಿ ಒಟ್ಟು ಮೂವರು ನಾಯಕಿಯರು. ಆಂಡ್ರಿಯಾ, ಆದಾಶರ್ಮಾ ಇನ್ನಿಬ್ಬರು. ಹಿಟ್ ಚಿತ್ರಗಳ ನಿರ್ದೇಶಕ ಎಂದೇ ಜನಪ್ರಿಯರಾಗಿರುವ ಪಾಂಡಿರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶೀಘ್ರದಲ್ಲೇ ತೆರೆಗೆ ಬರಲಿದೆಯಂತೆ. ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಈ ಪ್ರೇಮಕಥೆಗೆ ಶಿಂಬು ತಮ್ಮ ಕುರುಳ ಅರಸನ್ ಸಂಗೀತ ಸಂಯೋಜಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ