ನಯನತಾರಾ-ವಿಘ್ನೇಶ್ ಶಿವನ್ ಈಗ ಅಧಿಕೃತವಾಗಿ ಗಂಡ-ಹೆಂಡ್ತಿ
ಕಳೆದ ಆರು ವರ್ಷಗಳಿಂದ ಪ್ರೇಮಿಗಳಾಗಿದ್ದ ನಯನತಾರಾ-ವಿಘ್ನೇಶ್ ಇಂದು ಬೆಳಿಗ್ಗೆ ಮಹಾಬಲಿಪುರಂನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಸತಿಪತಿಗಳಾದರು. ಇಂದು ಬೆಳಿಗ್ಗೆ 8.30 ಕ್ಕೆ ವಿವಾಹ ಕಾರ್ಯಕ್ರಮ ನೆರವೇರಿದೆ.
ಈ ಕಾರ್ಯಕ್ರಮದಲ್ಲಿ ಇಬ್ಬರ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಪಾಲ್ಗೊಂಡಿದ್ದಾರೆ. ಮಧ್ಯಾಹ್ನದ ಬಳಿಕ ಇಬ್ಬರೂ ಫೋಟೋ ಶೇರ್ ಮಾಡಲಿದ್ದಾರೆ. ವಿವಾಹ ಮಂಟಪದ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ನಯನತಾರಾ-ವಿಘ್ನೇಶ್ ಜೋಡಿಗೆ ಶುಭ ಹಾರೈಸಲು ಸೂಪರ್ ಸ್ಟಾರ್ ರಜನೀಕಾಂತ್, ಕಮಲ್ ಹಾಸನ್, ಸೂರ್ಯ, ಅಜಿತ್, ವಿಜಯ್ ಸೇರಿದಂತೆ ಗಣ್ಯರು ಆಗಮಿಸುವ ನಿರೀಕ್ಷೆಯಿದೆ.