ವಿಕ್ರಂ ನಿರ್ದೇಶಕ ಲೋಕೇಶ್ ಗೆ ದುಬಾರಿ ಕಾರು ಗಿಫ್ಟ್ ಮಾಡಿದ ಕಮಲ್ ಹಾಸನ್

ಮಂಗಳವಾರ, 7 ಜೂನ್ 2022 (16:48 IST)
ಚೆನ್ನೈ: ವಿಕ್ರಂ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಮಾಡುತ್ತಿರುವುದರಿಂದ ಖುಷಿಯಾಗಿರುವ ಕಮಲ್ ಹಾಸನ್ ನಿರ್ದೇಶಕ ಲೋಕೇಶ್ ಕನಗರಾಜುಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.

ವಿಕ್ರಂ ನಿರ್ದೇಶಕನಿಗೆ ಕಮಲ್ ಹಾಸನ್ ದುಬಾರಿ ಬೆಲೆಯ ಐಷಾರಾಮಿ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಕಮಲ್ ಕಾರಿನ ಕೀ ಹಸ್ತಾಂತರಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಕ್ರಂ ನಾಲ್ಕೇ ದಿನಗಳಲ್ಲಿ 175 ಕೋಟಿ ರೂ. ಗಳಿಕೆ ಮಾಡಿ ದಾಖಲೆ ಮಾಡಿದೆ. ಇದರಿಂದ ಕಮಲ್ ಖುಷಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ