ಡ್ರಗ್ ಲಿಂಕ್ ನಲ್ಲಿ ನಾಲ್ವರು ಬಾಲಿವುಡ್ ಸ್ಟಾರ್ ನಟರ ಹೆಸರು ಬಹಿರಂಗ

ಶುಕ್ರವಾರ, 25 ಸೆಪ್ಟಂಬರ್ 2020 (21:57 IST)
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ ಡ್ರಗ್ ಲಿಂಕ್ ನಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದಾರೆ.

ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಅವರ ಹೆಸರನ್ನು ಹೇಳಿದ್ದಾಳೆ ಎನ್ನಲಾಗಿದೆ.

ಆಕೆಯ ವ್ಯವಸ್ಥಾಪಕ ಜಯ ಸಹಾ ಅವರು ಶ್ರದ್ಧಾ ಕಪೂರ್‌ಗೆ ಡ್ರಗ್ಸ್ ಖರೀದಿಸಿದ್ದಾಗಿ ಎನ್‌ಸಿಬಿ ಎದುರು ತಪ್ಪುಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ದೀಪಿಕಾ ಪಡುಕೋಣೆ ಅವರ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಅವರ ಹೆಸರೂ  ಬೆಳಕಿಗೆ ಬಂದಿದೆ.

ರಕುಲ್ ತನ್ನ ಕೆಲವು ನಿಕಟವರ್ತಿಗಳಿಗೆ ಡ್ರಗ್ಸ್ ಪೂರೈಸಿದ ವ್ಯಕ್ತಿ ಎಂದು ಕ್ಷಿತಿಜ್ ಹೆಸರನ್ನು  ತೆಗೆದುಕೊಂಡಿದ್ದಾಳೆ. ರಕುಲ್ ಎನ್‌ಸಿಬಿಗೆ ಹಲವಾರು ವಿವರಗಳನ್ನು ನೀಡಿದ್ದು, ಕ್ಷಿತಿಜ್ ರವಿ ಪ್ರಸಾದ್ ಅವರಿಂದ ಡ್ರಗ್ಸ್ ಸಂಗ್ರಹಿಸುತ್ತಿದ್ದ 4 ಸೆಲೆಬ್ರಿಟಿ ನಟರ ಹೆಸರನ್ನು ನೀಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ