ಡ್ರಗ್ ಸರಬರಾಜು ಮಾಡಿದ್ದೇ ನಾನು ಎಂದ ಬಾಲಿವುಡ್ ನಟಿ?
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿಯ ಮನೆಗೆ ಡ್ರಗ್ಸ್ ಸರಬರಾಜು ಮಾಡಿದ್ದಾಗಿ ಬಾಲಿವುಡ್ ನಟಿಯೊಬ್ಬರು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ, ರಿಯಾ ಚಕ್ರವರ್ತಿ ಮನೆಗೆ ಡ್ರಗ್ಸ್ ಗಳನ್ನು ಪೂರೈಸಿದ್ದಾಗಿ ರಕುಲ್ ಪ್ರೀತ್ ಸಿಂಗ್ ಎನ್‌ಸಿಬಿ ಮುಂದೆ ಒಪ್ಪಿಕೊಂಡಿದ್ದಾರೆ. ಆದರೆ ಯಾವುದೇ ನಿಷೇಧಿತ ಮಾದಕ ದ್ರವ್ಯವನ್ನು ಸ್ವತಃ ಸೇವಿಸುತ್ತಿರಲಿಲ್ಲ ಎಂದಿದ್ದಾರೆ.