ಎದ್ದೇಳ್ರೋ..! ಪುಷ್ಪ 2 ಟೀಂಗೆ ನೆಟ್ಟಿಗರಿಂದ ಕಪಾಳ ಮೋಕ್ಷ

ಭಾನುವಾರ, 6 ಆಗಸ್ಟ್ 2023 (09:10 IST)
Photo Courtesy: Twitter
ಹೈದರಾಬಾದ್: ಪುಷ್ಪ ಭಾಗ 1 ಬಂದು ವರ್ಷವೇ ಆದರೂ ಪುಷ್ಪ 2 ಇನ್ನೂ ರೆಡಿಯಾಗದೇ ಇರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪುಷ್ಪ 2 ಸಿನಿಮಾ ಚಿತ್ರೀಕರಣ ಆರಂಭವಾಗಿಯೇ ಎಷ್ಟೋ ಸಮಯವಾಗಿದೆ. ಆದರೆ ಇದುವರೆಗೆ ಚಿತ್ರೀಕರಣವಾಗಿದ್ದು ಕೇವಲ 35 ಶೇಕಡಾ ಮಾತ್ರ. ಚಿತ್ರತಂಡ ತೀರಾ ನಿಧಾನವಾಗಿ ಕೆಲಸ ಮಾಡುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಟ್ವಿಟರ್ ನಲ್ಲಿ ‘ವೇಕ್ ಅಪ್ ಟೀಂ ಪುಷ್ಪ’ ಎಂದು ಅಭಿಯಾನ ಶುರು ಮಾಡಿರುವ ನೆಟ್ಟಿಗರು ಪುಷ್ಪ ಟೀಂಗೆ ಕಪಾಳ ಮೋಕ್ಷ ಮಾಡುವ ರೀತಿ ಮೆಮೆ ಹಾಕಿಕೊಂಡು ಎಚ್ಚರಿಸುವ ಪ್ರಯತ್ನ ನಡೆಸಿದೆ. ಅಭಿಮಾನಿಗಳ ಈ ಒತ್ತಾಯಕ್ಕೆ ಮಣಿದಾದರೂ ಪುಷ್ಪ 2 ಟೀಂ ಏನಾದರೂ ಅಪ್ ಡೇಟ್ ಕೊಡುತ್ತಾ ನೋಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ