ಪುಷ್ಪ 2 ನಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕ್ತಾರಂತೆ ಕನ್ನಡತಿ ಶ್ರೀಲೀಲಾ

ಶನಿವಾರ, 29 ಜುಲೈ 2023 (17:01 IST)
ಹೈದರಾಬಾದ್: ಕನ್ನಡದ ಬೆಡಗಿ ಶ್ರೀಲೀಲಾ ಈಗ ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿ. ಲೇಟೆಸ್ಟ್ ಮಾಹಿತಿ ಪ್ರಕಾರ ಪುಷ್ಪ 2 ಸಿನಿಮಾದಲ್ಲಿ ಐಟಂ ಸಾಂಗ್ ಒಂದಕ್ಕೆ ಹೆಜ್ಜೆಯಿಡಲಿದ್ದಾರೆ ಎನ್ನಲಾಗಿದೆ.

ಪುಷ್ಪ 1 ರಲ್ಲಿ ಸಮಂತಾ ಋತು ಪ್ರಭು ಊಂ ಆಂಟವಾ ಎಂಬ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಹಾಡು ಭಾರೀ ಹಿಟ್ ಆಗಿತ್ತು. ಇದೀಗ ಪುಷ್ಪ 2 ರಲ್ಲೂ ಇಂತಹದ್ದೇ ಐಟಂ ಹಾಡನ್ನು ಚಿತ್ರತಂಡ ಹಾಕಿಕೊಳ್ಳುತ್ತಿದೆ.

ಈ ಹಾಡಿಗೆ ಹೆಜ್ಜೆ ಹಾಕಲು ಚಿತ್ರತಂಡ ಶ್ರೀಲೀಲಾ ಜೊತೆ ಮಾತುಕತೆ ನಡೆಸಿದೆಯಂತೆ. ಈಗಾಗಲೇ ಶ್ರೀಲೀಲಾ ತೆಲುಗಿನ ಹಲವು ಸ್ಟಾರ್ ಗಳಿಗೆ ನಾಯಕಿಯಾಗುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆಗೂ ಒಂದು ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಇದೀಗ ಪುಷ್ಪ 2 ರಲ್ಲೂ ಕಾಣಿಸಿಕೊಂಡರೆ ಆಕೆಯ ಮಾರ್ಕೆಟ್ ವ್ಯಾಲ್ಯೂ ಇನ್ನಷ್ಟು ಏರಿಕೆಯಾಗುವುದು ಖಂಡಿತಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ