ಪುಷ್ಪ ಡೈರೆಕ್ಟರ್ ಸುಕುಮಾರ್ ಜೊತೆ ರಾಮ್ ಚರಣ್ ಮುಂದಿನ ಸಿನಿಮಾ
ಸುಕುಮಾರ್ ನಿರ್ದೇಶನದಲ್ಲಿ ರಾಮ್ ಚರಣ್ ಈ ಮೊದಲು ರಂಗಸ್ಥಳಂ ಸಿನಿಮಾ ಮಾಡಿದ್ದರು. ಅದು ಭಾರೀ ಹಿಟ್ ಆಗಿತ್ತು. ಇದಾದ ಬಳಿಕ ರಾಮ್ ಚರಣ್ ಮತ್ತು ಸುಕುಮಾರ್ ತಮ್ಮದೇ ಸಿನಿಮಾಗಳಲ್ಲಿ ಬ್ಯುಸಿಯಾದರು. ಇದೀಗ ಈ ಹಿಟ್ ಜೋಡಿ ಮತ್ತೆ ಒಂದಾಗುತ್ತಿದೆ.
ಎರಡು ಕುದುರೆಗಳು ಓಡಲು ತಯಾರಾಗಿರುವ ಫೋಟೋ ಇರುವ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಆರ್ ಸಿ16 ಸಿನಿಮಾ ಬಳಿಕ ರಾಮ್ ಚರಣ್ ಕೈಗೆತ್ತಿಕೊಳ್ಳಲಿರುವ ಪ್ರಾಜೆಕ್ಟ್ ಇದಾಗಲಿದೆ. ಈ ಹಿಟ್ ಜೋಡಿ ಮತ್ತೆ ಒಂದಾಗಿ ಸಿನಿಮಾ ಮಾಡುತ್ತಿರುವುದರಿಂದ ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಾಗಿದೆ.
ಸುಕುಮಾರನ್ ಫೇವರಿಟ್ ಸಂಗೀತ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಅಲಿಯಾಸ್ ಡಿಎಸ್ ಪಿ ಈ ಸಿನಿಮಾಗೆ ಸಂಗೀತ ಸಂಯೋಜಿಸಲಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹಾಕುತ್ತಿದೆ. ಸಿನಿಮಾದ ಬಗ್ಗೆ ಉಳಿದ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.