ಚೇತನ್ ಅವರ ತಾರ ಬದುಕಿನ ಮತ್ತೊಂದು ಮಹತ್ವದ ಚಿತ್ರ ಮೈನಾ. ಆ ಚಿತ್ರವನ್ನು ನಿರ್ದೇಶಿಸಿದವರು ನಟ ನಿರ್ದೇಶಕ ನಾಗಶೇಖರ್. ಆ ಚಿತ್ರದ ಹಾಡುಗಳು ಮಾತ್ರವಲ್ಲ ಚಿತ್ರವು ಸಹಿತ ಯಶಸ್ವಿ ಆಯಿತು. ಮೈನಾ ಮೂಲಕ ನಾಗ ಶೇಖರ್ ಪೂರ್ಣ ಪ್ರಮಾಣದ ನಿರ್ದೇಶಕರಾದರು. ಈ ಚಿತ್ರ ಫಿಲಿಂಫೇರ್ ಮತ್ತು ಸೀಮಾ ಚಲನಚಿತ್ರ ಪ್ರಶಸ್ತಿ ಸ್ಪರ್ಧೆಯಲ್ಲಿ 21 ಪ್ರಶಸ್ತಿಗಳನ್ನು ಪಡೆಯಿತು. ಚೇತನ್ ಜೊತೆ ನಿತ್ಯ ಮೆನನ್ ನಟಿಸಿದ್ದರು ಮೈನಾದಲ್ಲಿ. ಈ ಜೋಡಿ ಮತ್ತೊಂದು ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಆ ಚಿತ್ರವನ್ನು ಸಹಿತ ನಾಗಶೇಖರ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಇದರ ಹೆಸರು ಗಡಿಯಾರ!