ಬೆಂಗಳೂರು: ಚಿನ್ನಾರಿ ಮುತ್ತ ನಟ ವಿಜಯ್ ರಾಘವೇಂದ್ರ 50 ನೇ ಸಿನಿಮಾ ಟೈಟಲ್ ಘೋಷಣೆ ಮಾಡಲಾಗಿದೆ. ಇದು ಅವರ ವೃತ್ತಿಜೀವನಕ್ಕೆ ಹೊಸ ಇಮೇಜ್ ತಂದುಕೊಡುವುದು ಖಂಡಿತಾ.
ವಿಜಯ್ ರಾಘವೇಂದ್ರ 50 ನೇ ಸಿನಿಮಾಗೆ ‘ಸೀತಾರಾಮ್ ಬಿನೋಯ್’ ಎಂದು ಟೈಟಲ್ ಇದ್ದು, ಕೇಸ್ ನಂ.18 ಎಂಬ ಅಡಿಬರಹವೂ ಇದೆ. ವಿಜಯ್ ಪೊಲೀಸ್ ಅಧಿಕಾರಿಯ ಅವತಾರದಲ್ಲಿರುವ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಇದು ಒಂದು ಥ್ರಿಲ್ಲಿಂಗ್ ಕಥಾ ಹಂದರ ಒಳಗೊಂಡಿದೆ ಎನ್ನುವುದು ಖಚಿತ. ದೇವಿ ಪ್ರಸಾದ್ ಶೆಟ್ಟಿ ಈ ಸಿನಿಮಾವನ್ನು ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ.