ಗುಡ್ ನ್ಯೂಸ್ ಕೊಟ್ಟ ನಿಖಿಲ್-ರೇವತಿ ದಂಪತಿ: ತಾತನಾಗುತ್ತಿದ್ದಾರೆ ಎಚ್ ಡಿಕೆ

ಸೋಮವಾರ, 21 ಜೂನ್ 2021 (17:19 IST)
ಬೆಂಗಳೂರು: ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ-ರೇವತಿ ದಂಪತಿ ಸದ್ಯದಲ್ಲೇ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.


ನಿಖಿಲ್ ಪತ್ನಿ ರೇವತಿ ಇದೀಗ ಐದು ತಿಂಗಳ ಗರ್ಭಿಣಿ. ಇಂದು ರೇವತಿ ಹುಟ್ಟುಹಬ್ಬವಿದ್ದು, ಇದರ ಜೊತೆಗೇ ಸಿಹಿ ಸುದ್ದಿಯೂ ಹೊರಬಂದಿದೆ. ಕಳೆದ ವರ್ಷ ಲಾಕ್ ಡೌನ್ ವೇಳೆ ನಿಖಿಲ್-ರೇವತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಇದೀಗ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತಾತನಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ತುಂಬು ಗರ್ಭಿಣಿ ಪತ್ನಿ ರೇವತಿಯ ಜನ್ಮದಿನವನ್ನು ನಿಖಿಲ್ ವಿಕಲಚೇತನರೊಂದಿಗೆ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ