ನಿಖಿಲ್ ಕುಮಾರಸ್ವಾಮಿ ಪತ್ನಿಯ ಸೀಮಂತ ಸಂಭ್ರಮ

ಸೋಮವಾರ, 13 ಸೆಪ್ಟಂಬರ್ 2021 (16:53 IST)
ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಪುಟ್ಟ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ದೊಡ್ಡ ಗೌಡರ ಕುಟುಂಬ ತಮ್ಮ ಸೊಸೆ ರೇವತಿ ಸೀಮಂತ ಶಾಸ್ತ್ರ ನೆರವೇರಿಸಿದೆ.
 


ತುಂಬು ಗರ್ಭಿಣಿ ರೇವತಿ ಸೀಮಂತ ಶಾಸ್ತ್ರ ಇಂದು ನಗರದ ಕನ್ವೆಷನ್ ಹಾಲ್ ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ದೇವೇಗೌಡರ ಕುಟುಂಬ ಮಾತ್ರವಲ್ಲದೆ, ಗಣ್ಯರು ಆಗಮಿಸಿ ನಿಖಿಲ್-ರೇವತಿ ಜೋಡಿಗೆ ಹಾರೈಸಿದ್ದಾರೆ.

ಕಳೆದ ವರ್ಷ ಮದುವೆಯಾಗಿದ್ದ ನಿಖಿಲ್-ರೇವತಿ ಜೋಡಿ ಇದೀಗ ಮಗುವಿನ ನಿರೀಕ್ಷೆಯಲ್ಲಿದೆ. ಈ ಕಾರ್ಯಕ್ರಮಕ್ಕೆ ಗೌಡರ ಕುಟುಂಬದ ಆಪ್ತೇಷ್ಟರು, ರಾಜಕೀಯ ನಾಯಕರು ಆಗಮಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ