ತಲೆ ಬಾಚ್ಕೊಳ್ಳಿ ಪೌಡರ್ ಹಾಕೊಳ್ಳಿ ಎನ್ನುತ್ತಿರುವ ನಿಖಿತಾ

ಮಂಗಳವಾರ, 30 ಜೂನ್ 2015 (10:29 IST)
ತಲೆ ಬಾಚ್ಕೊಳ್ಳಿ ಪೌಡರ್ ಹಾಕೊಳ್ಳಿ ಎಂದು ರಂಗಾಯಣ ರಘು ಅವರು  ತಮ್ಮ ಪಾತ್ರದ ಮೂಲಕ ಈ ಸಾಲುಗಳಿಗೆ ಜೀವ ತುಂಬಿದ್ದರು. ಈಗ ಅದೇ ಹೆಸರಿನ ಚಿತ್ರದಲ್ಲಿ ನಿಕಿತ ತುಕ್ರಾಲ್ ನಟಿಸುತ್ತಿದ್ದಾರೆ. ಇದರಲ್ಲಿ ಆಕೆ ಜೊತೆ ನವನಾಯಕ ವಿಕ್ರಮ್ ಆರ್ಯ ನಟಿಸುತ್ತಿದ್ದಾರೆ. 
ದ್ಯಾನಮ್ಮ ದೇವಿ ಕ್ರಿಯೇಷನ್ಸ್ ನಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರವನ್ನು ನಾಮದೇವ ಭಟ್ಟಾರ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ವಿದ್ಯಾರಣ್ಯಪುರ, ದೇವರಾಜ್ ಎಸ್ಟೇಟ್ ಮತ್ತು  ಕಂಟ್ರಿ ಕ್ಲಬ್ ನಲ್ಲಿ ನಡೆಯಲಿದೆ. ವಿಕ್ರಮ್ ಆರ್ಯ ಮತ್ತು ನಿಕಿತ ಟೆನಿಸ್  ಜೊತೆಯಾಟದ  ದೃಶ್ಯಗಳನ್ನು ಇತ್ತೀಚೆಗೆ ಚಿತ್ರೀಕರಣ ಮಾಡಲಾಯಿತು. ನಿಕಿತ ಈ ಚಿತ್ರಕ್ಕೆ ಹತ್ತು ದಿನಗಳ ಕಾಲ್ ಶೀಟ್ ನೀಡಿದ್ದಾರಂತೆ. 
 
ವೇಣುಗೋಪಾಲ್ ಅವರು ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ವಿಜಯ ಭಾರತಿ ಅವರು ಸಂಗೀತ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಮನು ಯಪ್ಲಾರ್ ಕ್ಯಾಮರ ವರ್ಕ್, ಕುಮಾರ್ ಕೋಟೆ ಕೊಪ್ಪ ಸಂಕಲನ, ತ್ರಿಭುವನ್ ನೃತ್ಯ , ಬಾಬು ಖಾನ್ ಕಲೆ, ಮಾದೇಶ್ ಮುತ್ತಪ್ಪ ಸಂಭಾಷಣೆ ಇದೆ. ಚಿಕ್ಕಣ್ಣ, ಅಮನ್ ಗರೆವಾಲ್, ಶೋಭರಾಜ್, ರಮೇಶ್ ಭಟ್, ಬುಲೆಟ್ ಪ್ರಕಾಶ್, ಪದ್ಮಜಾರಾವ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ